Select Size
Quantity
Product Description
" *ಕನ್ನಡ ಕಲಿಕಾ ಕಿರಣ''* ಈಗ ಸಾರ್ವಜನಿಕರಿಗಾಗಿ ಬಿಡುಗಡೆಗೊಂಡಿದೆ.
*ಹೊಸಶಿಕ್ಷಣ (NEP)* ನೀತಿ ಮಾರ್ಗಸೂಚಿಯ ಚಟುವಟಿಕೆಯಾಧಾರಿತ ಮತ್ತು ಪರಿಪೂರ್ಣ ಕಲಿಕೆಯಡಿಯಲ್ಲಿ, ಪ್ರಾದೇಶಿಕ ಭಾಷೆಯಾದ ಕನ್ನಡಭಾಷಾ ಕಲಿಕೆಗಾಗಿ ರೂಪಿಸಲಾಗಿರುವ ಒಂದು ವಿಶಿಷ್ಟ ಕಲಿಕಾ ಕಾರ್ಯಕ್ರಮವೇ " *ಭಾಷಾವಿದ್ಯಾ ಕನ್ನಡ ಕಲಿಕಾ ಕಿರಣ".*
ಕನ್ನಡಭಾಷೆಯನ್ನು ಮಕ್ಕಳಿಗೆ ಆಸಕ್ತಿದಾಯಕವಾಗಿ ಕಲಿಸಲು, ಕಲಿಕಾ ಸಾಮಗ್ರಿಗಳ ಕೊರತೆ ನಮ್ಮಲ್ಲಿ ಸಾಕಷ್ಟಿದೆ.
ಇಂದು ಕನ್ನಡ ಕಬ್ಬಿಣದ ಕಡಲೆಯಾಗಿರುವ ಖಾಸಗೀ ಶಾಲೆಗಳಲ್ಲಿ ಇವುಗಳ ಕೊರತೆ ಎದ್ದು ಕಾಣುತ್ತಿದೆ.
*ಭಾಷಾವಿದ್ಯಾ ಕನ್ನಡ ಕಲಿಕಾ ಕಿರಣ* ಈ ಕೊರತೆಯನ್ನು ನೀಗಿಸಲಿದೆ.
ಕನ್ನಡ ಭಾಷೆಯನ್ನು ಸಮರ್ಪಕವಾಗಿ ಕಲಿಯಲು ಬೇಕಾದ
೧.ವರ್ಣಮಾಲೆ
೨.ಕಾಗುಣಿತ
೩. ಸಜಾತೀಯ ಒತ್ತಕ್ಷರಗಳು
೪. ವಿಜಾತೀಯ ಒತ್ತಕ್ಷರಗಳು ಮತ್ತು
೫. ಅರ್ಕಾವಳಿಗಳ
೬. ಪದ ಸಂಪತ್ತು
೭. ಸಂಪೂರ್ಣ ಓದುವಿಕೆ
ಈ ಎಲ್ಲಾ ಪರಿಕಲ್ಪನೆಗಳನ್ನು ಪ್ರತ್ಯೇಕವಾಗಿ, ಹಂತಹಂತವಾಗಿ ಪರಿಚಯಿಸಲಾಗಿದೆ ಮತ್ತು ಚಟುವಟಿಕೆಗಳು ಮತ್ತು ಆಟಗಳ ಮೂಲಕ ಪ್ರತಿ ಪರಿಕಲ್ಪನೆಯನ್ನೂ ಗಮನವಿಟ್ಟು ಸರಿಯಾಗಿ ಕಲಿಯಲು ಅನುಕೂಲವಾಗುವಂತೆ ಕಲಿಕಾನುಭವಗಳನ್ನು ಕಲ್ಪಿಸಿಕೊಡಲಾಗಿದೆ.
ಈ ಕಾರ್ಯಕ್ರಮವು ಪುಟ್ಟ ಮಕ್ಕಳಿಂದ ಹಿಡಿದು ವಯಸ್ಕ ಕನ್ನಡ ಕಲಿಕಾಸಕ್ತರವರೆಗೆ ಎಲ್ಲರಿಗೂ, ಎಲ್ಲಾ ಪ್ರಾಥಮಿಕ ಭಾಷಾ ಪರಿಕಲ್ಪನೆಗಳನ್ನೂ ಆಟಗಳ ಮೂಲಕ ಗಮನವಿಟ್ಟು ಕಲಿಯಲು ಸಹಕಾರಿಯಾಗಲಿದೆ.
ಪ್ರತಿ ಕನ್ನಡ ಕಲಿಕಾರ್ಥಿಯೂ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತಾಗಲಿ ಎಂದು ಆಶಿಸುತ್ತೇವೆ.
ಭಾಷಾವಿದ್ಯಾ ಕನ್ನಡ
Publisher
Krithi Samskrithi Kalakendra
Publication Year
2022
ISBN-13
9789394034099
Binding
Hard Bound
Width
30 CMS
Language
Kannada