Quantity
Product Description
ಹಲವು ಸಮಾಜಸೇವಾ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಅನಿರುದ್ಧ ಜತಕರ ಅವರು ಕಲಾವಿದ, ಗಾಯಕ, ನಿರ್ದೇಶಕ, ಒಳ್ಳೆಯ ಓದುಗ ಅನ್ನುವುದು ಗೊತ್ತಿತ್ತು. ಅವರು ಬರೆಯುತ್ತಾರೆ ಅನ್ನುವುದು ಬೆಳಕಿಗೆ ಬಂದದ್ದು ತೀರಾ ಇತ್ತೀಚೆಗೆ. ಅನೇಕ ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳಲ್ಲಿ ಅನಿರುದ್ಧ ಅವರ ಬರಹಗಳು ಪ್ರಕಟಗೊಂಡಿವೆ.
ಅನಿರುದ್ಧ ಅವರು ಮೂಲತಃ ಭಾವಜೀವಿ. ಸಮಾಜದಲ್ಲಿ ಯಾವುದೇ ವಿಘಟನೆ ಕಂಡುಬಂದರೂ ಅದಕ್ಕೆ ಪ್ರತಿಕ್ರಿಯಿಸುತ್ತಾರೆ. ತನ್ನ ನಿಲುವಿಗೆ ಬದ್ಧರಾಗಿರುತ್ತಾರೆ. ತಾನು ನಂಬಿದ ಸಿದ್ಧಾಂತವನ್ನು ಯಾವತ್ತೂ ಬಿಟ್ಟು ಹೋಗುವುದಿಲ್ಲ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಯಾರ ಕುರಿತೂ ಅವಹೇಳನಕಾರಿಯಾಗಿ ಮಾತಾಡುವುದಿಲ್ಲ ಅನ್ನುವುದು ಅವರನ್ನು ಹತ್ತಿರದಿಂದ ಬಲ್ಲ ಎಲ್ಲರಿಗೂ ಗೊತ್ತು. ಅವರ ವೈಚಾರಿಕ ಪ್ರಭೆ ಕೂಡ ಅವರ ಮಾತು ವರ್ತನೆಗಳಲ್ಲಿ ಹೊರಹೊಮ್ಮುತ್ತಿರುತ್ತದೆ.
ಇದೀಗ ಅವರು ಬರೆದಿರುವ ಲೇಖನಗಳನ್ನೆಲ್ಲ ಒಟ್ಟಾಗಿಸಿ ತಂದಿರುವ ಸಾಲುಗಳ ನಡುವೆ ಸಂಕಲನದ ಶೀರ್ಷಿಕೆಯೇ ಅರ್ಥಪೂರ್ಣವಾಗಿದೆ. ಇಂಗ್ಲಿಷಿನಲ್ಲಿ ರೀಡ್ ಬಿಟ್ವೀನ್ ದಿ ಲೈನ್ಸ್ ಅಂದರೆ ಅಲ್ಲಿ ಏನು ಬರೆದಿದೆಯೋ ಅದಷ್ಟನ್ನೇ ಅಲ್ಲದೇ, ಆ ಮಾತುಗಳ ಹಿಂದೆ ಅಡಗಿರುವುದನ್ನೂ ಗ್ರಹಿಸು ಅಂತ ಅರ್ಥ. ಒಳ್ಳೆಯ ಓದುಗ ಯಾವತ್ತೂ ಸಾಲುಗಳ ನಡುವೆ ಇರುವುದನ್ನೂ ಓದಬಲ್ಲ. ಎಲ್ಲ ಲೇಖಕರ ಬರಹಗಳಲ್ಲೂ ಅಂಥ ಅಂತರ್ಗತವಾದ ವಿಶೇಷ ಅರ್ಥ ಹೊರಡಿಸುವ ಸಾಲುಗಳಿರುತ್ತವೆ.
ಪುನೀತ್ ನಿರ್ಗಮಿಸಿದ ಸಂದರ್ಭದಲ್ಲಿ ವಿದೇಶದಿಂದ ಮರಳಿದ ಅವರ ಮಗಳನ್ನು ಸಮೂಹ ನಡೆಸಿಕೊಂಡ ರೀತಿ, ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕು ಎಂಬ ಪಾಠ, ಕುರುಡರ ನಗರಿಯಲ್ಲಿ ಕನ್ನಡಿ ಮಾರುವವನ ಅಂತರಂಗ, ಸತ್ಯಜಿತ್ ರೇ ಜಗತ್ತಿಗೆ ಒಂದು ಬೆಳಕಿಂಡಿ, ಎಂ ಎಸ್ ಸತ್ಯು ಸಮೀಪಚಿತ್ರ, ಚಿತ್ರಕತೆಯ ದೈವಿಕ ಅನುಭವ, ಸಲೀಂ ಜಾವೇದ್ ಕುರಿತ ಮೆಚ್ಚುಗೆ- ಹೀಗೆ ವೈವಿಧ್ಯಮಯ ಸಂಗತಿಗಳನ್ನೆಲ್ಲ ಈ ಕೃತಿಯಲ್ಲಿ ಅನಿರುದ್ಧ ದಾಖಲಿಸುತ್ತಾ ಹೋಗಿದ್ದಾರೆ.
ಪ್ರತಿಭೆ ಮತ್ತು ಒಳನೋಟ, ವಿನಯ ಮತ್ತು ವೈವಿಧ್ಯ ಇರುವ ಈ ಸಂಕಲನದ ಹಲವು ಬರಹಗಳು ಅನಿರುದ್ಧ ಅವರನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತವೆ. ಅವರ ಆಸಕ್ತಿಯ ವಿಸ್ತಾರವನ್ನೂ ತೋರುತ್ತವೆ.
ಈ ಪುಸ್ತಕಕ್ಕಾಗಿ ಅನಿರುದ್ಧ ಜತಕರರನ್ನು ಅಭಿನಂದಿಸುತ್ತಾ, ಗ್ರಂಥಲೋಕಕ್ಕೆ ಅವರನ್ನು ಸ್ವಾಗತಿಸುತ್ತಿದ್ದೇನೆ.
Binding
Soft Bound
Number of Pages
160
Publisher
Sawanna Enterprises
Publication Year
2025
Author
Aniruddha Jatkar
ISBN-13
9788199065451
Height
2 CMS
Length
22 CMS
Weight
200 GMS
Width
14 CMS
Language
Kannada