Product Description
ಭಾರತದಲ್ಲಿ ಮತ್ತು ಇತರ ದೇಶಗಳಲ್ಲಿ ತಮ್ಮ ವಿಶಿಷ್ಟ ಕಲಾಕೃತಿಗಳ ಮೂಲಕ ಖ್ಯಾತರಾಗಿರುವ ಕಟ್ಟಿಂಗೇರಿ ಕೃಷ್ಣ ಹೆಬ್ಬಾರರ ರೇಖೆಗಳಿಗೆ ಅವುಗಳದೇ ಆದ ಸಹಜ ಸೊಬಗು. ತೀರಾ ವಿರಳವಾದ ಸರಳ ರೇಖೆಗಳಿಂದ ಮೂಡಿಬರುವ ಅವರ ಚಿತ್ರಗಳಿಗೆ ಜೀವನದ ತುಡಿತವನ್ನು ನಮ್ಮ ಕಣ್ಣ ಮುಂದೆ ನಿಲ್ಲಿಸಬಲ್ಲಂಥ ಮಾಂತ್ರಿಕ ಶಕ್ತಿ. ಇವು ಹೆಬ್ಬಾರರ ರೇಖೆಗಳೇ ಎಂದು ಗುರುತಿಸಲು ಸಹಕರಿಸುವಂಥವು. ನೃತ್ಯ ಕಲಾವಿದೆಯ ನೃತ್ಯದ ನಯ, ಲಯಗಳನ್ನು, ಗತಿಯ ಮಾಧುರ್ಯವನ್ನು ಸೆರೆ ಹಿಡಿಯಲು ಸಮರ್ಥವಾದ ಅವು ಹಾಡುವ ರೇಖೆಗಳು, ಕುಣಿಯುವ ರೇಖೆಗಳು! ತುಂಬು ವ್ಯಕ್ತಿತ್ವದ ಈ ಅಪೂರ್ವ ಕಲೆಗಾರರ ಆತ್ಮೀಯ ಮಿತ್ರರೂ, ಬಂಧುಗಳೂ ಆದ, ಕನ್ನಡದ ಖ್ಯಾತ ಲೇಖಕ ಶ್ರೀ ವ್ಯಾಸರಾಯ ಬಲ್ಲಾಳರು ಹೆಬ್ಬಾರರ ಕಲಾಜೀವನದ ಹಲವು ಮುಖಗಳನ್ನು ಅವರೊಂದಿಗೆ ಕಳೆದ ಹಲವು ಆತ್ಮೀಯ ಕ್ಷಣಗಳನ್ನು ಇಲ್ಲಿರುವ ಲೇಖನಗಳ ಮೂಲಕ ಪರಿಚಯ ಮಾಡಿಕೊಟ್ಟಿದ್ದಾರೆ.