Quantity
Product Description
ಬೆಣ್ಣೆಯಂತ ಬಣ್ಣದ ಚರ್ಮ, ಮುದ್ದಾದ ಮುಖಗಳು, ಅರ್ಧ ಎದೆ, ಮುಕ್ಕಾಲು ಕಾಲುಗಳು ಅವರದಲ್ಲವೇನೋ ಎನ್ನುವಂತೆ ಪ್ರದರ್ಶನ ಮಾಡುತ್ತ ಅರಗಿನ ದೇವತೆಗಳಂತ ಸಹೋದ್ಯೋಗಿ ಹೆಣ್ಣುಗಳು ಮೈ ತಾಗಿಸಿಕೊಂಡೇ ಓಡಾಡುತ್ತಿದ್ದರೂ ಅವರನ್ನು ನೇರವಾಗಿ ಆಸೆಯಿಂದ ನೋಡುವುದು ಕೂಡ ಪಾಪ ಎನ್ನುವಂತೆ, ಕಣ್ಣಿಗೆ ನಿಯಂತ್ರಣ ಇಟ್ಟುಕೊಂಡಿರಬೇಕು. ಅವರು ಅಷ್ಟುದ್ದ ದೂರಕ್ಕೆ ಹೋದ ನಂತರ ಕಂಡೂ ಕಾಣದಂತೆ ಒಮ್ಮೆ ಕದ್ದು ನೋಡುವುದು ಮಾತ್ರವೇ ಸಾಧ್ಯವಿದ್ದುದು. ಅಷ್ಟೇ ಏಕೆ, ತಲೆಯ ಮೇಲೆ ಅಪ್ಪನ ಸಾಲದ ಹೊರೆ, ಮನೆಯವರ ಅಭಿಲಾಷೆಗಳ ಭಾರ, ಚೆನ್ನಾಗಿ ತರಬೇತಿ ಪಡೆದು ಮೇಲೆ ಬರಬೇಕೆಂಬ ಹಂಬಲ, ಎಲ್ಲಿ ಯಾವುದಾದರೂ ತಪ್ಪನ್ನು ಮಾಡಿ, ಆಕಸ್ಮಿಕ ಯಾವುದಾದರೂ ರೋಗಿ ಗೊಟಕ್ ಅಂದುಬಿಟ್ಟರೆ ಎನ್ನುವ ಭಯವನ್ನು ಹೊತ್ತ ನಮ್ಮ ಹುಡುಗರಿಗೆ ತರಬೇತಿ ಪಡೆಯುತ್ತಿರುವ ವರ್ಷಗಳಲ್ಲಿ ಸೆಕ್ಸ್ ನೆನಪಾಗುವುದು ಕೂಡ ಕಷ್ಟವೇ!
ರಾಮಚಂದ್ರನ್ ಉಪಯೋಗಿಸಿದ್ದು ಒಂದೇ ಒಂದು ಬೆರಳು. ಅಷ್ಟಕ್ಕೇ ದೇಶ ಬಿಡಬೇಕಾಯ್ತು. ತಾನು ಐದೂ ಬೆರಳುಗಳನ್ನು ಉಪಯೋಗಿಸಿಬಿಟ್ಟೆನಲ್ಲ... ಅಂತ ನೆನಪಾಗುತ್ತಲೇ ವಿಶ್ವನ ಕಣ್ಣುಗಳು ತನ್ನ ಕೋಣೆಯಲ್ಲಿದ್ದ ಸೂಟ್ಕೇಸ್ಗಳನ್ನು ತಡವಿ ಹಿಂತಿರುಗಿದವು.
Author
B Premalatha
Binding
Soft Bound
Number of Pages
136
Publication Year
2022
Publisher
Seema Books
Height
1 CMS
Length
22 CMS
Weight
100 GMS
Width
14 CMS
Language
Kannada