Quantity
Product Description
‘ಬಂಗಾರದ ಮನುಷ್ಯರು’ (ಬೆಳಕಿನ ಬೇಸಾಯದ ಕಥಾನಕ) ಲೇಖಕ ಚಿನ್ನಸ್ವಾಮಿ ವಡ್ಡಗೆರೆ ಅವರ ಕೃತಿ. ಈ ಪುಸ್ತಕಕ್ಕೆ ಪ್ರೊ. ಕಾಳೇಗೌಡ ನಾಗವಾರ ಮುನ್ನುಡಿ ಬರೆದಿದ್ದಾರೆ. ಅಧ್ಯಾಪಕ, ಪತ್ರಕರ್ತ, ಚಿಂತಕ, ಕೃಷಿಕ ಮತ್ತು ಆರೋಗ್ಯಕರ ಸಮಾಜದ ಕನಸುಗಾರರಾಗಿ ಮಾಗುತ್ತಿರುವ ಗೆಳೆಯ ಚಿನ್ನಸ್ವಾಮಿ ಅವರ ಬಂಗಾರದ ಮನುಷ್ಯರು ನೇಗಿಲ ಯೋಗಿಗಳ ಬೆಳಕಿನ ಬೇಸಾಯದ ವಿವಿಧ ಕಥಾನಕಗಳ ಸದಭಿರುಚಿ ಮತ್ತು ಜನಪರ ನಿಲುವುಗಳ ಉಪಯುಕ್ತ ಸಂಪುಟ ಎನ್ನುತ್ತಾರೆ ಹಿರಿಯ ಲೇಖಕ ಕಾಳೇಗೌಡ ನಾಗವಾರ.
ಬೇರೆ ಬೇರೆ ಹಿನ್ನೆಲೆಗಳ ತದೇಕಚಿತ್ತದ ನಿಜವಾದ ಮಣ್ಣಿನ ಮಕ್ಕಳ ಹೊನ್ನಿನ ಕ್ರಿಯೆಗಳು ಮತ್ತು ಸಾಧಕನ ಪ್ರಯತ್ನಗಳನ್ನು ಕಂಡು, ಕೇಳಿ, ತಿಳಿದು, ಆಲೋಚಿಸುತ್ತಲೇ ಓದುಗರಿಗೆ ಜನಪರವಾಗಿ ನಾವೂ ಮುನ್ನುಗ್ಗಬೇಕೆನ್ನುವ ಹಂಬಲ ಮೂಡಿಸುವುದು ಈ ಗ್ರಂಥದ ವೈಶಿಷ್ಟ್ಯ. ಸೃಜನಶೀಲವೂ, ತುಂಬಾ ಪ್ರಾಯೋಗಿಕವೂ, ಪರಿಸರಸ್ನೇಹಿಯೂ ಆದ ಬದುಕಿನ ಕ್ರಮ ಹಾಗೂ ತಲ್ಲೀನತೆಯಲ್ಲಿಯ ಆನಂದದಾಯಕ ಸೊಗಸುಗಳನ್ನು ಕನ್ನಡ ಓದುಗರಿಗೆ ಪರಿಣಾಮಕಾರಿಯಾಗಿ ನೀಡಿರುವ ಬಂಗಾರದ ಮನುಷ್ಯರು ಕೃಷಿ ಸಾಹಿತ್ಯದಲ್ಲೇ ಅಪರೂಪ ಎನ್ನಬಹುದಾದ ಗ್ರಂಥವಾಗಿದೆ ಎಂದು ಪ್ರಶಂಸಿಸಿದ್ದಾರೆ
Binding
Soft Bound
Number of Pages
486
Publication Year
2025
Author
Chinnaswamy Vaddagere
Publisher
Abhiruchi Prakashana
Height
3 CMS
Width
14 CMS
Length
22 CMS
Weight
500 GMS
Language
Kannada