Select Size
Quantity
Product Description
ಸಮಕಾಲೀನ ಕನ್ನಡ ನಾಟಕಕಾರರಲ್ಲಿ ಡಾ. ಡಿ.ಎಸ್. ಚೌಗಲೆ ಅವರು ಪ್ರಮುಖರು. ಬೆಳಗಾವಿ ಜಿಲ್ಲೆ ಅವಿಭಜಿತ ಚಿಕ್ಕೋಡಿ ತಾಲೂಕಿನ ಬೇಡಕಿಹಾಳ ಗ್ರಾಮದಲ್ಲಿ ಜೂನ 10 1961 ರಂದು ಜನಿಸಿದ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಮ್.ಎ ಸ್ನಾತಕೋತ್ತರ ಪದವಿ ಪಡೆದರು. ಬೆಳಗಾವಿಯ ಭಾವುರಾವ ಕಾಕತಕರ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕನ್ನಡ, ಮರಾಠಿ ಭಾಷೆಯ ನಡುವೆ ಅನುಸಂಧಾನವೊಂದನ್ನು ಸೃಷ್ಟಿಸಿರುವ ಅವರು ಎರಡೂ ಭಾಷೆಯ ಮೇಲೆ ಪ್ರಭುತ್ವ ಹೊಂದಿದವರು.
'ದಿಶಾಂತರ', 'ವಖಾರಿಧೂಸ', 'ಕಸ್ತೂರಬಾ', 'ಉದ್ದಸ್ಥ', 'ಉಚಲ್ಯಾ', 'ಜನಮೆಚ್ಚಿದ ಅರಸು', 'ತಮಾಶಾ', 'ಸಾವಿತ್ರಿಬಾಯಿ ಫುಲೆ', 'ಡಿ.ಎಸ್.ಚೌಗಲೆಯವರ ಏಳು ನಾಟಕಗಳು' ಇವು ಅವರ ಬಹುಚರ್ಚಿತ ನಾಟಕಗಳು, ಒಟ್ಟು ಹದಿನೈದು ನಾಟಕಗಳು, 1998 ರಲ್ಲಿ ಮೈಸೂರಿನ ರಂಗಾಯಣ ಪ್ರಯೋಗಿಸಿದ ಅನುವಾದಿತ ನಾಟಕ 'ಗಾಂಧಿ ವರ್ಸಸ್ ಗಾಂಧಿ' ಕನ್ನಡರಂಗಭೂಮಿಯಲ್ಲಿ ಹೊಸ ಸಂಚಲನ ಉಂಟು ಮಾಡಿ ಒಂದು ಮೈಲುಗಲ್ಲಾಯಿತು. ಅದು 2020 ರ ತನಕ 22 ವರ್ಷಗಳವರೆಗೆ ಸುದೀರ್ಘ ಪ್ರಯೋಗ ಕಂಡದ್ದು ಒಂದು ದಾಖಲೆ. 'ಗಾಂಧಿ-ಅಂಬೇಡಕರ', 'ಪೇಯಿಂಗ್ಗೆಸ್ಟ್', 'ಕಿರವಂತ', 'ಶುದ್ಧವಂಶ', 'ಚದುರಂಗ ಮತ್ತು ಕತ್ತೆ', 'ಸತ್ಯಶೋಧಕ' ಮುಂತಾದ ಮಹತ್ವದ ನಾಟಕಗಳನ್ನು ಕನ್ನಡಕ್ಕೆ ಕೊಟ್ಟಿದ್ದಾರೆ.
Length
22 CMS
Width
14 CMS
Height
1 CMS
Weight
100 GMS
Number of Pages
92
Binding
Soft Bound
Author
D S Chougale
ISBN-13
9789354563591
Publication Year
2022
Publisher
Sapna Book House Pvt Ltd
Language
Kannada