Select Size
Quantity
Product Description
ಆ ಕೋಣೆ ಚಿಕ್ಕಂದಿನಿಂದಲೂ ನನ್ನನ್ನು ಬಹಳವಾಗಿ ಆಕರ್ಷಿಸುತ್ತಿತ್ತು. ಕೋಣೆಯ ನಾಲ್ಕೂ ಮೂಲೆಗಳಲ್ಲೂ ಗೋಡೆಗೆ ಬಡಿದಿದ್ದ ಕುದುರೆ ಗೊರಸುಗಳು. ಮದರಾಸು ತಾರಸಿ ತೊಲೆಯಿಂದ ಇಳಿ ಬಿದ್ದಿದ್ದ ಕುದುರೆ ಬಾಲದ ನೀಳ ಗೊಂಚಲು. ಅದಕ್ಕೆ ಸಮಾನ ಎತ್ತರದಲ್ಲಿ ಕೋಣೆಯ ಉತ್ತರ ಹಾಗೂ ದಕ್ಷಿಣ ಭಾಗದ ಗೋಡೆಗಳ ಮೇಲೆ ಜೀವಂತವಾಗಿರುವಂತೆ ಭಾಸವಾಗುತ್ತಿದ್ದ, ಪರಸ್ಪರ ಅಭಿಮುಖವಾಗಿದ್ದ ನೀಳಕತ್ತಿನ ಎರಡು ಕುದುರೆ ಮುಖಗಳು. ಎತ್ತರದ ಮರದ ಬೀರುವಿನಲ್ಲಿ ಸಾಲಾಗಿ ಜೋಡಿಸಿಟ್ಟಿದ್ದ ಪುಸ್ತಕಗಳು, ಪಂಚಾಂಗಗಳು, ಬೀರುವಿನ ಕೆಳಭಾಗದಲ್ಲಿದ್ದ ಒಂದು ಕೈಯ್ಯಲ್ಲಿ ಎತ್ತಲು ಸಾಧ್ಯವಾಗದ ಗಾತ್ರದ ಮನುಷ್ಯ ಹಾಗೂ ಕುದುರೆ ದೇಹ ರಚನೆಗಳನ್ನು ಹೋಲಿಸಿ ಬರೆದಿರುವ ರೇಖಾ ಚಿತ್ರಗಳ ಒಂದುಗ್ರಂಥ. ಪಕ್ಕದಲ್ಲೇ ಇದ್ದ ಮರದ ಪುಟ್ಟ ಸಂದೂಕ. ಅದರೊಳಗೆ ಇದ್ದ ಎಲೆಯಡಿಕೆ ಚೀಲ. ಅದರೊಳಗೆ ಇದ್ದ ಹೆಬ್ಬೆಟ್ಟು ಗಾತ್ರದ ಹಲ್ಲುಗಳು, ಚೌಕಾಕಾರದ ಮೂರು ದಂತದ ದಾಳಗಳು. ಇವೆಲ್ಲವನ್ನೂ ಅಪ್ಪ ಇಲ್ಲದ ಸಮಯವನ್ನು ಕಾದುಕದ್ದು ನೋಡಿದ್ದೆ. ಎಷ್ಟು ಬಾರಿ ನೋಡಿದರೂ ಅವು ಇನ್ನಷ್ಟು ಮತ್ತಷ್ಟು ನಿಗೂಢವಾಗಿ ಕಾಣುತ್ತಿದ್ದವು. ಅವನ್ನು ಹಾಗೆ ನೋಡುತ್ತಿದ್ದಾಗ ಒಮ್ಮೆ ಅಪ್ಪನ ಕೈಗೆ ಸಿಕ್ಕಿಬಿದ್ದಿದ್ದೆ. ಮಗನ ಮೀಸೆ ಮೋಳೆಯುತ್ತಿದೆ ಎಂಬುದನ್ನೂ ಲೆಕ್ಕಿಸದೆ ಅಪ್ಪ ಕಪಾಳಕ್ಕೆ ರಪರಪ್ಪ ಬಿಗಿದಿದ್ದ. ನಾನೂ ಅಪ್ಪನ ಮೆಲೆ ಕೈಮಾಡುವ ಉದ್ಧಟತನ ತೋರಿದ್ದೆ. 'ಅವರಿಲ್ಲದಾಗ ಆ ರೂಮಿಗೆ ನಿನ್ಯಾಕೆ ಹೋದೆ, ಅಲ್ಲೇನಿದೆ ನಿಮ್ಮಮ್ಮನ ಹೆಣ'ಅಮ್ಮ ಮುಸಿಮುಸಿ ಅಳುತ್ತಾ ಹೇಳಿದ್ದಳು .ನಾನು ಸ್ವಾಭಿಮಾನಿಯಾಗಿದ್ದೆ. ಅಪ್ಪರೂಮಿಗೆ ಬೀಗ ಹಾಕತೊಡಗಿದ್ದ.
Height
2 CMS
Width
14 CMS
Weight
200 GMS
Length
22 CMS
Publication Year
2025
Binding
Soft Bound
Publisher
Kamadhenu Pustaka Bhavana
Author
K N Venkatasubba Rao
Number of Pages
206
Language
Kannada