Quantity
Product Description
ರಾಷ್ಟ್ರೀಯತೆಗೆ ಮತ್ತು ಜನಾಂಗಗಳಿಗೆ ಸಂಬಂಧವಿದೆಯೆನ್ನುವುದು ಸ್ಥಾಪಿತವಾಯಿತು. ಇದರಿಂದಾಗಿ ಅನೇಕ ದೇಶಗಳು ಜನಾಂಗ ಮತ್ತು ಅದರ ಪಾವಿತ್ರ್ಯ ಹಾಗೂ ಭಾಷೆಗಳ ಜೊತೆಗೆ ಸಂಬಂಧವನ್ನು ಕಾಪಾಡಿಕೊಳ್ಳಲು ಯಶಸ್ವಿಯಾದವು. ರಾಷ್ಟ್ರೀಯತೆಯ ವ್ಯಾಖ್ಯಾನಕ್ಕೆ ಇದು ಒಂದು ರಹದಾರಿಯೂ ಆಯಿತು ಎನ್ನುವುದು ನಿಜ. ದೇಶಭಕ್ತಿಯು ಅತಿಯಾದ ಹಂತಕ್ಕೆ ಹೋದಾಗ ಅದರಲ್ಲಿ ಒಂದು ಬಗೆಯ ಉಗ್ರತೆಯು ಕಾಣಿಸಿಕೊಳ್ಳುತ್ತದೆ. ಅನ್ಯದೇಶಗಳ ಜೊತೆಗೆ ದ್ವೇಷವೂ ಪ್ರಾರಂಭವಾಗುತ್ತದೆ. ರಾಜಕೀಯ ರಚನೆಗಳು ಹಿಂಸಾಚಾರಕ್ಕೆ ತಿರುಗುತ್ತವೆ ಇದು ಗಮನಾರ್ಹ. ಒಂದು ಅಪಾಯಕಾರಿಯಾದ ನಿಲುವು ಬಂದಾಗ ಅದನ್ನು ತಡೆಗಟ್ಟುವ ವಿಧಾನಗಳು ಕೂಡಾ ನಿಶ್ಚಕ್ತಿಯಿಂದ ಕೊಡುತ್ತವೆ. ರಾಷ್ಟ್ರೀಯತೆಯ ಏಕತೆಯನ್ನು ಪ್ರದರ್ಶಿಸಿದರೂ ಅಂತಿಮವಾಗಿ ಅದು ಭಾವಾವೇಶದ ಒಂದು ಪ್ರಾತಿನಿಧಿಕ ಸಂಕೇತವಾಗುತ್ತದೆ. ಇದರ ಮತ್ತೊಂದು ಸಂಗತಿಯನ್ನು ನಾವು ಗಮನಿಸಬೇಕು. ರಾಷ್ಟ್ರೀಯತೆಯು ತನಗೆ ಬೇಕಾದ ಕೆಲವು ಮಹಾನ್ ಕಾನೂನುಗಳನ್ನು ರೂಪಿಸಲ್ಪಡುತ್ತವೆ. ಧರ್ಮ ಮತ್ತು ರಾಷ್ಟ್ರೀಯತೆ ಜೊತೆ ಸೇರಿದಾಗ ರಾಷ್ಟ್ರದ ವ್ಯಾಖ್ಯಾನವು ಬೇರೆಯಾಗುತ್ತವೆ. ರಾಷ್ಟ್ರದ ಏಕತೆಯೆಂದರೇನು ಎನ್ನುವ ಪ್ರಶ್ನೆಗಳು ಬರುತ್ತವೆ. ಅದು ಜನಾಂಗವಾದಿಯಾದರೆ ಅನ್ಯದೇಶದ ಅನ್ಯಜನಾಂಗದ ಬಗ್ಗೆ ದ್ವೇಷವು ತನ್ನಿಂದ ತಾನಾಗಿಯೇ ಬರುತ್ತದೆ.
Publication Year
2026
Publisher
Desi Pustaka (Srushti)
Number of Pages
324
ISBN-13
9788194064923
Author
Keshava Sharma K
Binding
Soft Bound
Language
Kannada
Width
14 CMS
Weight
500 GMS
Length
22 CMS
Height
4 CMS