Quantity
Product Description
ಊರ ಮಧ್ಯದ ಕಣ್ಣ ಕಾಡಿನೊಳಗೆ' ಕೃತಿ, ಅಸ್ಪೃಶ್ಯತೆಯ ಜಾಡಿನ ಸಾಕಷ್ಟು ವಿಷಯಗಳನ್ನು ತುಂಬಿಕೊಂಡಿದ್ದು 'Indian village is a cesspool of violence and discrimination' ಎನ್ನುವುದನ್ನು; ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ಅಸಹಿಷ್ಣುತೆಯ ಕರಾಳ ಭಾರತದ ಕಥೆಗಳನ್ನು ಹೇಳುತ್ತದೆ. ಭಾರತದ ಒಂದು ಗುಂಪು ಮಹಾತ್ಮ ಗಾಂಧೀಜಿಯನ್ನು ನೇರವಾಗಿ ದೂಷಿಸಿದರೆ, ಇನ್ನೊಂದು ಗುಂಪು ಅಂಬೇಡ್ಕರ್ ಅವರನ್ನು ಒಳಗೊಳಗೆ ತೀವ್ರವಾಗಿ ವಿರೋಧಿಸುತ್ತ ಮೇಲೆ ನೆಚ್ಚಿಕೊಂಡಂತೆ ನಟಿಸುತ್ತಿದೆ. ಬಾಬಾಸಾಹೇಬರು ದೇಶವನ್ನು ಒಗ್ಗಟ್ಟಾಗಿರಿಸುವ ಅದ್ಭುತ ಸಂವಿಧಾನ ರಚಿಸಿಕೊಟ್ಟರೂ ಜಾತಿಭ್ರಷ್ಟ ಭಾರತ ಅದನ್ನು ಮನಸ್ಪೂರ್ತಿಯಾಗಿ ತನ್ನ ಮನೆಯೊಳಕ್ಕೆ ಬಿಟ್ಟುಕೊಳ್ಳಲಿಲ್ಲ. ಜಗತ್ತು ಎಲ್ಲಿಗೋ ಹೋಗುತ್ತಿದ್ದರೆ ಭಾರತದ ಜನರ ಮನಸ್ಸು ಮಾತ್ರ ಸಾವಿರಾರು ವರ್ಷಗಳ ಹಿಂದಿನ ವಿಷವರ್ತುಲ ಸಮಾಜದ ಕಡೆಗೆ ಸಾಗುತ್ತಿದೆ. ಅದು ಸನಾತನ ಧರ್ಮದ ಚೌಕಟ್ಟಿನೊಳಗೆ ಮುದುರಿಕೊಳ್ಳುತ್ತಿದ್ದು ಯಾವುದೇ ಸಣ್ಣ ಘಟನೆ ನಡೆದರೂ ಗಂಗಾಜಲ, ಗಂಜಳ ಹಾಕಿ ಶುದ್ದಿಮಾಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಹಾಗೆಯೇ ಮೇಲ್ಮಾತಿ-ಕೀಳ್ವಾತಿ ಯುವಕ-ಯುವತಿಯರ ನಡುವೆ ಪ್ರೀತಿ-ಪ್ರೇಮ, ಮದುವೆಗಳು ನಡೆದರೆ ಯಾವ ಎಗ್ಗೂ ಇಲ್ಲದೆ ಕೊಲೆಗಳು ನಡೆದುಬಿಡುತ್ತವೆ. ಒಂದು ಕಡೆ ಮೇರಾ ಭಾರತ್ ಮಹಾನ್ ಆದರೆ ಇನ್ನೊಂದು ಕಡೆ ಕೊಲೆಗಳ ಭಾರತ ಜೊತೆಜೊತೆಯಾಗಿ ಸಾಗುತ್ತಿದೆ. ಜಾತಿ ಪದ್ಧತಿಯಲ್ಲಿ ಅಂಬೇಡ್ಕರ್ ಅವರ ಭ್ರಾತೃತ್ವಕ್ಕೆ ದೇಶದಲ್ಲಿ ಜಾಗವೇ ಇಲ್ಲದಾಗಿದೆ
Author
Mudnakudu Chinnaswamy
Binding
Soft Bound
Number of Pages
150
Publication Year
2025
Publisher
Nava Karnataka Publications Pvt Ltd
Height
2 CMS
Length
22 CMS
Weight
200 GMS
Width
14 CMS
Language
Kannada