Quantity
Product Description
ಊರ ಉಸಾಬರಿ ಮಾತು-ರತಿ
ಊರೆಂದೋ ಊರು ನಾನು ನೆಲೆಯೂರಿದ ಊರುಗಳಲ್ಲ. ನನ್ನೊಳಗೆ ನೆಲೆಯೂರಿದ ಊರುಗಳಿವು. ನನ್ನೂರು ಯಾವುದು ಅಂತ ಕೇಳಿದರೆ ನನಗೆ ಈಗಲೂ ಸ್ಪಷ್ಟವಾಗಿ ಹೇಳಲಾಗುವುದೇ ಇಲ್ಲ. ಕೆಲವು ನನ್ನನ್ನ ತಮ್ಮವಳು ಅಂತ ಅಕ್ಕೊಂಡವು. ಇನ್ನೂ ಕೆಲವು ನನ್ನೂರಾಗಬಹುದಾಗಿದ್ದವು. ನನ್ನನ್ನು ಪರಕೀಯಳಂತೆಯೇ ಕಂಡವು. ಬೀದರಿನಲ್ಲಿ ಹುಟ್ಟಿ ಬೆಳೆದರೂ ಎಲ್ಲಿಯೂ ಬೇರೂರಿಲ್ಲ, ಬಳ್ಳಿಯಂತೆ ಹಬ್ಬುತ್ತ. ಹಬ್ಬಿದೆಡೆಯೆಲ್ಲ ಕಳ್ಳುಬಳ್ಳಿಯೊಂದಿಗೆ ಅಂಟಿಕೊಳ್ಳುತ್ತ ಬದುಕಿರುವೆ. ಕಣಕಣದಲ್ಲಿರುವ ಕಾಶಿಗೆ ಹೋದಾಗಲೇ ಅರಿವಾದುದು. ನನ್ನ ಅಣುಅಣುವಿನಲ್ಲಿಯೂ ಬೀದರ್ ತುಂಬಿಕೊಂಡಿದೆ ಅಂತ. ಅಣುವಿನಲ್ಲಿಯೂ, ಕಣದಲ್ಲಿಯೂ ಒಂದಿನಿತು ಪ್ರೀತಿಗಾಗಿ ತಹತಹ ಇದ್ದದ್ದೇ. ಸಿಗದ ಪ್ರೀತಿಯ ಬೆನ್ನಟ್ಟಿದಾಗ, ಕಳೆದುಕೊಂಡ ಸುರಕ್ಷೆಯ ಭಾವವನ್ನು ನೀಡಿದ್ದು ಈ ಬರಹಗಳು. ಹೀಗೆ ಒಟ್ಟುಗೂಡಿ, ಊರ ಉಸಾಬರಿಯ ನೆಪದಲ್ಲಿ ಪುಸ್ತಕರೂಪದಲ್ಲಿ ಬಂದಿದೆ.
Author
S Rashmi
Binding
Soft Bound
ISBN-13
9789348262646
Number of Pages
120
Publication Year
2025
Publisher
Ankitha Pusthaka
Height
1 CMS
Length
22 CMS
Weight
200 GMS
Width
14 CMS
Language
Kannada