Product Description
‘ಹೊಸ ಪಕ್ಷಿರಾಗ’, ‘ಸಂವಾದ’ ಮಾಸಪತ್ರಿಕೆಯಲ್ಲಿ ಸುಮಾರು ಒಂದು ವರ್ಷಗಳ ಕಾಲ (2011 ಜುಲೈ ಇಂದ 2012 ಜುಲೈವರೆಗೆ) ಬರೆದ ಲೇಖನಗಳಿಗೆ ಅಂಕಣ ಶೀರ್ಷಿಕೆಯಾಗಿ ಇಟ್ಟ ಹೆಸರು. ಇದರಲ್ಲಿ ಮಹಿಳಾ ದೌರ್ಜನ್ಯದ ವಿರುದ್ಧ ಎತ್ತಿರುವ ನನ್ನ ಪ್ರಾಮಾಣಿಕ ಧ್ವನಿಯಿದೆ. ಹಾಗೆಯೇ ಧರ್ಮ, ಅರ್ಥ, ಕಾಮ, ರಾಜಕಾರಣ, ಶಿಕ್ಷಣ, ಸಿನಿಮಾ, ಸಮಾಜ ಮುಂತಾದ ನಮ್ಮ ಅವಿಭಾಜ್ಯ ಅಂಗಗಳ ಬಗೆಗೆ ಚಿಂತಿಸುವಾಗ ನನಗೆ ದೊರೆತ ಹೊಸತನದ ದೃಷ್ಟಿಯಿದೆ. ಇದು ಯಥಾಪ್ರಕಾರ ನನ್ನ ನೆಚ್ಚಿನ ಸಂತರಾದ ಶಿಶುನಾಳ ಷರೀಫರಿಂದ ದೊರೆತಿರುವ ‘ಪಾರಿವಾಳ’ದ ಶಾಂತಿ ಸಂದೇಶದ ಶಾಶ್ವತೆಯ ದೃಷ್ಟಿ. ಇದರ ಜೊತೆಗೆ ‘ವಾರ್ತಾಭಾರತಿ’ ಪತ್ರಿಕೆಯ ಕೆಲವು ಲೇಖನಗಳು ಹಾಗೂ ‘ಅಡ್ವೈಸರ್’ ಮಾಸಪತ್ರಿಕೆಯ ಒಂದು ಲೇಖನವೂ ಸೇರಿದೆ. ಜೊತೆಗೆ ಶ್ರೀ ಭುವನೇಂದ್ರ ಕಾಲೇಜು, ಕಾರ್ಕಳಿಲ್ಲಿನ ಸುವರ್ಣ ಸಂಚಿಕೆಗಾಗಿ ಬರೆದ ಒಂದು ಲೇಖನವೂ ಸೇರಿದೆ.