Product Description
ಶಾಲೆಯಲ್ಲಿ ನಡೆಯುವ ಎಲ್ಲ ಚಟುವಟಿಕೆಗಳ ಪರಿಚಯ ನೀಡುವ ಕೃತಿ ‘ಸ್ಕೂಲ್ ಡೈರಿ’. ಪಾಠಗಳಲ್ಲಿ ಕಾಣಿಸದ ಎಷ್ಟೋ ವಿಷಯಗಳನ್ನು ಮಕ್ಕಳಿಗೆ ಪರಿಚಯ ಮಾಡಿಸುವ ಪರಿಣಾಮಕಾರಿ ಕ್ರಮ ಇದು. ಮಕ್ಕಳ ಆಟಪಾಠಗಳ ಜೊತೆಗೆ ಸ್ಥಳೀಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಘಟನೆಗಳ ಸಂಕ್ಷಿಪ್ತ ಪರಿಚಯ ನೀಡುವ ಮೂಲಕ ಮಕ್ಕಳ ಅರಿವಿನ ಎಲ್ಲೆಯನ್ನು ವಿಸ್ತರಿಸುವುದಕ್ಕೆ ಸಹಾಯವಾಗುವಂತೆ ಈ ಡೈರಿಯನ್ನು ರಚಿಸಲಾಗಿದೆ. ಶಾಲೆಯ ಚಟುವಟಿಕೆಯೊಂದಿಗೆ ನಮ್ಮ ದೇಶದ, ನಾಡಿನ ಪ್ರಮುಖ ದಿನಾಚರಣೆಗಳ, ಪ್ರಮುಖರ ಜನ್ಮ ದಿನಗಳ ಮಾಹಿತಿ ಇದರಲ್ಲಿದೆ. ಒಂದು ಶಾಲೆಯ ಮಕ್ಕಳು ಮತ್ತೊಂದು ಶಾಲೆಯ ಮಕ್ಕಳೊಂದಿಗೆ ಸಂವಾದ ನಡೆಸುವಂತಿದ್ದು, ಇದರ ಪ್ರಯೋಜನ ಎಲ್ಲ ಶಾಲೆಯ ಮಕ್ಕಳಿಗೂ ಲಭಿಸುತ್ತದೆ.