Select Size
Quantity
Product Description
‘ನೂರ್ ಜಹಾನ್’ (ಐತಿಹಾಸಿಕ ಕಾದಂಬರಿ) ಲೇಖಕಿ ವಿಜಯಾ ಸುಬ್ಬರಾಜ್ ಅವರ ಕೃತಿ. ನಾಲ್ಕನೇ ಮೊಘಲ್ ದೊರೆ ಜಹಾಂಗೀರ್ ನನ್ನು ವಿವಾಹವಾದ ನೂರ್ ಜಹಾನ್ ಮೊದಲ ಹೆಸರು ಮೆಹರುನ್ನಿಸಾ. ಆಕೆಯ ಸೌಂದರ್ಯಕ್ಕೆ ಮರುಳಾಗಿದ್ದ ದೊರೆ ಜಹಾಂಗೀರ್ ಆಕೆಯನ್ನು ನೂರ್ ಜಹಾನ್ ಎಂದು ಕರೆಯುತ್ತಾನೆ ನೂರ್ ಜಹಾನ್ ಎಂದರೆ ವಿಶ್ವದ ಬೆಳಕು ಎಂದು ಮುಂದೆ ಆಕೆಯ ಹೆಸರು ನೂರ್ ಜಹಾನ್ ಎಂದೇ ಪ್ರಸಿದ್ಧಿ ಪಡೆಯುತ್ತದೆ. ವ್ಯವಹಾರಜ್ಞಾನ, ಬುದ್ಧಿಕುಶಲತೆ ಮತ್ತು ಮಹತ್ತ್ವಾಕಾಂಕ್ಷೆಗಳಿಂದ ಕೂಡಿದ್ದ ಈಕೆ ಸಾಮ್ರಾಟನನ್ನು ಮರುಳುಗೊಳಿಸಿ, ಆಡಳಿತದಲ್ಲಿ ಹಸ್ತಕ್ಷೇಪ ಮಾಡಿ ಎಲ್ಲವನ್ನೂ ನಿಯಂತ್ರಿಸತೊಡಗಿದಳು. ರಾಜ್ಯಭಾರದಲ್ಲಿ ಜಹಾಂಗೀರನ ಆಸಕ್ತಿ ಕ್ರಮೇಣ ಕಡಿಮೆಯಾಯಿತು. ಮದ್ಯಪಾನ ಮಾಂಸಾಹಾರಗಳಲ್ಲಿ ಕಾಲಕಳೆಯುತ್ತಿದ್ದ ಜಹಾಂಗೀರನನ್ನು ಮೂಲೆಗೆ ತಳ್ಳಿ ನೂರ್ಜಹಾನಳೇ ಸರ್ವಾಧಿಕಾರಿಣಿಯಾದಳು. ಅವಳ ಹೆಸರನ್ನು ಟಂಕಿಸಿದ ನಾಣ್ಯಗಳೂ ಚಲಾವಣೆಗೆ ಬಂದುವು. ಇಂಥ ನೂರ್ ಜಹಾನಳ ಕತೆಯಾಧಾರಿತ ಐತಿಹಾಸಿಕ ಕಾದಂಬರಿ ‘ನೂರ್ ಜಹಾನ್’.
Number of Pages
304
Binding
Soft Bound
Author
Dr Vijaya Subbaraj
Publication Year
2020
Publisher
Nava Karnataka Publications Pvt Ltd
Length
22 CMS
Height
3 CMS
Width
14 CMS
Weight
400 GMS
Language
Kannada