Quantity
Product Description
ಪುಸ್ತಕದ ಬಗ್ಗೆ: ಚಿತ್ರಕಾರನ ಬೆರಳು ಇತಿಹಾಸದ ಪುಟಗಳಲ್ಲಿರದ ಹೆಸರುಗಳು, ಬದುಕು ನಿಕೃಷ್ಟವಾಗಿ ನಡೆಸಿಕೊಳ್ಳುವ ಸಾಧಾರಣ ಜೀವಗಳು ಮತ್ತು ಲೋಕದ ರೀತಿಗೆ ಅರ್ಥವಾಗದ, ಲೋಕದ ರೀತಿಗೆ ಒಗ್ಗಲಾಗದ ಜೀವಗಳು ಇಲ್ಲಿನ ಕಥಾನಾಯಕ ನಾಯಕಿಯರು. ಇಂತಹ ಜೀವಗಳು ಹಾಗೇ ಇದ್ದು, ಇದ್ದದ್ದು ಗೊತ್ತೇ ಆಗದೇ ಬದುಕಿ ಹೋಗಿಬಿಡುವುದು ಒಂದು ಬಗೆಯಾದರೆ-ಯಾವುದೋ ಬಿಂದುವಿನಲ್ಲಿ, ತಿರುವಿನಲ್ಲಿ ಎಲ್ಲವನ್ನೂ ಮೀರಿ ಸಾಧಾರಣ ಜೀವಗಳು ಅಸಾಧಾಣವಾಗಿಬಿಡುವ ಸಾಧ್ಯತೆ ಮತ್ತೊಂದು. ಈ ಎರಡೂ ಬಗೆಯನ್ನು ಇಲ್ಲಿನ ಕತೆಗಳು ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತವೆ. ಇಲ್ಲಿನ ಕತೆಗಳಿಗೆ ಮನುಷ್ಯರ ಮುಖವಾಡ ಕಳಚಿದೆನೆಂಬ ದಾಷ್ಟö್ರ್ಯವಿಲ್ಲ. ಬದಲಾಗಿ, ಹಿಂದೆ ಕಾಡಿನಲ್ಲಿ ವಾಸಿಸುತ್ತಾ ಅನಾಗರಿಕರಾಗಿದ್ದ ಮನುಷ್ಯರು ನಾವು ಊರು ಕಟ್ಟಿ ನಾಗರಿಕರಾದ ಮೇಲೂ ಒಳಗಿನಿಂದ ನಿಜವಾಗಿಯೂ ಮನುಷ್ಯರಾಗಿದ್ದೇವೆಯೇ? ಒಳ್ಳೆಯ ಬಟ್ಟೆ ಹಾಕಿಕೊಂಡು, ಸೆಂಟು ಹೊಡೆದುಕೊಂಡು ಹೊರಗೆ ಘಮಗುಟ್ಟುವ ಮನುಷ್ಯರು ಒಳಗಿನಿಂದಲೂ ನಾತಮುಕ್ತರಾಗಿದ್ದೇವಾ? ಎಂದು ನಮಗೆ ನಾವೇ ಯೋಚಿಸುವಂತೆ ಮಾಡುತ್ತವೆ. ಚಿತ್ರಕಾರನ ಬೆರಳಿನಂತೆಯೇ ಶಾಂತಿ ಕೆ ಅಪ್ಪಣ್ಣ ಕತೆಗಳ ನಿರೂಪಣೆ ಒಂದು ಜಾದೂ ಬೆರಳಿನಿಂದ ಮೂಡಿಬಂದಂತೆ ಇವೆ ಮತ್ತು ಅವು ಸಾಮಾಜಿಕ ಬದುಕಿನಲ್ಲಿ ಹಾಕಿಕೊಂಡ ಚೌಕಟ್ಟು ಮೀರಿ, ನಾಗರಿಕ ಜಗತ್ತಿನ ನಿಯಮಗಳ ದಾಟಿ, ಸಮಾಜವೆಂಬ ದೇಹದ ನಿರ್ಬಂಧಿತ ಭಾಗಗಳನ್ನು
Author
Shanti K Appanna
Binding
Soft Bound
ISBN-13
9789348262028
Number of Pages
200
Publication Year
2025
Publisher
Ankitha Pusthaka
Height
2 CMS
Length
22 CMS
Weight
200 GMS
Width
14 CMS
Language
Kannada