Quantity
Product Description
ಅಂಗಿಯ ಗುಂಡಿ, ಚಪ್ಪಲಿಗಂಟಿದ ಕೆಸರು,ಮೇಜನ್ನು ತಯಾರಿಸಲು ಬಳಸಿದ ಮರ, ವ್ಯಕ್ತಿಯೊಬ್ಬ ಪೆನ್ನನ್ನು ಹಿಡಿಯುವ ರೀತಿ, ನಡಿಗೆಯಲ್ಲಿರುವ ಚೂರೇ ಚೂರು ವಕ್ರತೆ, ಕೋಣೆಯಲ್ಲಿನ ಪರಿಮಳ, ಕಾರವಸ್ತ್ರಕ್ಕಂಟಿದ ಕಣ್ಣೀರು-ನಾವೆಲ್ಲಾ ನಿರ್ಲಕ್ಷಿಸಿ ಮುನ್ನಡೆಯಬಹುದಾದ ಸಣ್ಣ ವಿಷಯಗಳೇ ಷರ್ಲಾಕ್ ಹೋಮ್ಸ್ ನನ್ನು ಹಿಡಿದು ನಿಲ್ಲಿಸುತ್ತಿದ್ದವು. ಅಪರಾಧದ ಸ್ಥಳದಲ್ಲಿ ಕಂಡ ನಗಣ್ಯವೆನ್ನುವಂತೆ ತೋರುವ ಸುಳಿವುಗಳನ್ನು ಹಿಂಬಾಲಿಸಿ, ಅವಕ್ಕೆ ತನ್ನ ಸರಿಸಾಟಿಯಿಲ್ಲದ ತರ್ಕಸರಣಿಯನ್ನು ಹೊಂದಿಸಿ, ಅಚ್ಚರಿಯೆನಿಸುವಂತೆ ಕೊಲೆಗಾರನನ್ನು ಪತ್ತೆ ಮಾಡುವ ವಿಶಿಷ್ಟ ದಾರಿಯೊಂದು ಅವನಿಗೆ ಗೊತ್ತಿತ್ತು. ಟೋಪಿ,ಸಿಗಾರ್ ಹಾಗೂ ಸಣ್ಣದೊಂದು ಭೂತಗನ್ನಡಿಯ ಜೊತೆ ಜಗತ್ತಿನ ಓದುಗರೆಲ್ಲ ಮನಸ್ಸಿನಲ್ಲಿ ಅಚ್ಚೋತ್ತಿದಂತೆ ಉಳಿದಿರುವ ಪತ್ತೇದಾರ ಷರ್ಲಾಕ್ ಹೋಮ್ಸ್ ಇರುವವರೆಗೆ ತಾನು ಬೇರೇನೂ ಬರೆಯಲಾರೆ ಎಂದೆನಿಸಿ ಒಂದು ಕತೆಯಲ್ಲಿ ಅವನನ್ನು ಸಾಯಿಸಿಬಿಟ್ಟನಂತೆ. ಆದರೆ ಅದಕ್ಕೆ ಓದುಗರ ಪ್ರತಿಕ್ರಿಯೆ ಹೇಗಿತ್ತೆಂದರೆ, ವಿಧಿಯಿಲ್ಲದೆ ಕೆಲ ವರ್ಷಗಳ ನಂತರ ಡಾಯ್ಲ್ ಇನ್ನೊಂದು ಕತೆ ಬರೆದು ಹೋಮ್ಸ್ ನನ್ನು ಬದಿಕಿಸಬೇಕಾಯ್ತು! ಅದ್ಭುತ ಪಾತ್ರಗಳೇ ಹಾಗೆ ಅಜರಾಮರ - ಸೃಷ್ಟಿಕರ್ತನೇ ಬಯಸಿದರು ಅವು ಸಾಯುವುದಿಲ್ಲ! ಕೆಂಪು ತಲೆಗೂದಲಿನ ರಹಸ್ಯ ಷರ್ಲಾಕ್ ಹೋಮ್ಸ್ ಸಾಹಸ ಸರಣಿಯ ಮತ್ತೊಂದು ಕಥಾಸಂಕಲನ
Binding
Soft Bound
Author
M V Nagaraj Rao
ISBN-13
9789348262097
Number of Pages
192
Publisher
Ankitha Pusthaka
Publication Year
2025
Height
2 CMS
Length
22 CMS
Weight
200 GMS
Width
14 CMS
Language
Kannada