Quantity
Product Description
ವಸಂತಕಾಲ ಚಿಗುರಿಸಿದ ಕಾನನದಲ್ಲಿ ಪಾಂಡುವಿನ ಪ್ರಾಣಕ್ಕಾಗಿ ಕಾತರಿಸಿ ಕಾಯುತ್ತಿತ್ತು ಸಾವು. ನದಿ ದಾಟಿಸಲೆಂದು ಬಂದ ಮತ್ಸ್ಯಗಂಧಿ ಮಹಾಯುದ್ಧಕ್ಕೆ ನೆಪವಾಗುತ್ತಾಳೆ. ಅಣ್ಣನ ಹೆಂಡತಿಯನ್ನು ಮೈದುನ ಬಯಸದ್ದಿರಿಂದ ಹೊಟ್ಟೆಯೊಳಗದ್ದಿ ಮಗು ಕತ್ತಲೆಯಲ್ಲೇ ಇರಬೇಕಾದ ಶಾಪಕ್ಕೆ ತುತ್ತಾಗುತ್ತದೆ. ದೇವಯಾನಿಯ ಪ್ರೇಮವನ್ನು ನಿರಾಕರಿಸಿದ ತಪ್ಪಿಗೆ ಕಚನಿಗೆ ಕಠೋರ ಶಾಪ ಸಿಗುತ್ತದೆ.
ಹದಿನೆಂಟು ದಿನ ನಡೆದ ಯುದ್ಧದಲ್ಲಿ ಹದಿನೆಂಟು ಅಕ್ಷೋಹಿಣಿ ಸೈನ್ಯ ಸರ್ವನಾಶವಾಗುತ್ತದೆ. ಮಹಾವೀರರು ಸೋಲುತ್ತಾರೆ, ಗೆದ್ದವರಿಗೆ ಸಂಭ್ರಮಿಸುವುದಕ್ಕೆ ಜತೆಗಾರರೇ ಇರುವುದಿಲ್ಲ, ಇಡೀ ಭರತಖಂಡದ ಪ್ರಚಂಡ ವೀರರೆಲ್ಲ ಕುರುಕ್ಷೇತ್ರದ ಮಣ್ಣಲ್ಲಿ ಮಣ್ಣಾಗುತ್ತಾರೆ. ಕಾಲ ಎಲ್ಲವನ್ನೂ ನೋಡುತ್ತಾ, ಮುಗುಳ್ನಗುತ್ತಿರುತ್ತಾನೆ.
ಮಹಾಭಾರತ ದಾಯಾದಿಗಳ ಕತೆಯಷ್ಟೇ ಅಲ್ಲ. ಹುಡುಕಿಕೊಂಡು ಹೋದಷ್ಟೂ ಹೊಸ ಹೊಸ ಕತೆಗಳು ಸಿಗುವ ಕಥೆಗಳ ಸಾಗರ ಅದು. ಒಮ್ಮೆ ಕೇಳಿದ ಕತೆಯನ್ನು ಮತ್ತೊಮ್ಮೆ ಕೇಳುವಾಗ ಹೊಸದೇ ಅರ್ಥ ಹೊಳೆಯುತ್ತದೆ. ಸುಮ್ಮನೆ ಕೇಳಿದರೆ ಒಂದು ಥರ, ಧ್ಯಾನಿಸಿದರೆ ಮತ್ತೊಂದು ಸ್ತರ, ಮನನ ಮಾಡಿದರೆ ಬೇರೆಯದೇ ಎತ್ತರ.
ವ್ಯಾಸಭಾರತದ ಒಳಹೊಕ್ಕು, ಕೇಳಿಯೂ ಕೇಳದ, ತಿಳಿದೂ ತಿಳಿಯದ ಅಪರೂಪದ ಪುಟ್ಟಪುಟ್ಟ ಕತೆಗಳನ್ನು ಕತೆಗಾರ ಗೋಪಾಲಕೃಷ್ಣ ಕುಂಟಿನಿ ಹೆಕ್ಕಿತಂದಿದ್ದಾರೆ. ಉತ್ಕಟ ಪ್ರೇಮ, ಬರ್ಬರ ಯುದ್ಧ-ಇವೆರಡರ ಹಿನ್ನೆಲೆಯಲ್ಲಿ ಅರಳಿದ ಕತೆಗಳಿವು.
ಈ ಕತೆಗಳು ಮಹಾಭಾರತದ ಕತ್ತಲೆಯ ಪುಟಗಳಿಗೆ ಹಿಡಿದ ಕಿರುಹಣತೆಯಂತಿವೆ.
-ಜೋಗಿ
Binding
Soft Bound
Author
Gopalakrishna Kuntini
Number of Pages
220
Publisher
Sawanna Enterprises
Publication Year
2024
Length
22 CMS
Weight
300 GMS
Language
Kannada
ISBN
9789393224606