Quantity
Product Description
ಪಂಚತಂತ್ರ'ದ ಪ್ರಪಂಚ ಪರ್ಯಟನದ ಒಂದು ಸ್ವಾರಸ್ಯಕರ ಕಥೆಯಿದೆ. ಸಾ.ಶ. ಆರನೆಯ ಶತಮಾನದಲ್ಲಿ ಪರ್ಶಿಯಾದಲ್ಲಿ ಅನುಶಿರ್ವನ್ ಎಂಬ ರಾಜನಿದ್ದ. ಆತನ ಬಳಿ ಬುರ್ಜೊಯ್ ಎಂಬ ವೈದ್ಯ ಪಂಡಿತನಿದ್ದ. ಅವನು ರಾಜನಿಗೆ ಆಪ್ತನಾಗಿದ್ದ. ರಾಜನ ಒಪ್ಪಿಗೆ ಪಡೆದು ಸತ್ತವರನ್ನು ಮರಳಿ ಜೀವಂತಗೊಳಿಸುವ 'ಸಂಜೀವಿನಿ' ತರಲು ಆತ ಭಾರತಕ್ಕೆ ಬರುತ್ತಾನೆ. ಇಲ್ಲಿಯ ಪರ್ವತಾರಣ್ಯ ಪ್ರದೇಶಗಳಲ್ಲಿ 'ಸಂಜೀವಿನಿಗಾಗಿ ಹುಡುಕಾಡುತ್ತಾನೆ. ಆತನಿಗೆ ಸಂಜೀವಿನಿ ಸಿಗುವುದಿಲ್ಲ. ನಿರಾಸೆಯಲ್ಲಿದ್ದಾಗ ಆತನಿಗೆ ಒಬ್ಬ ಸಂತನ ಭೇಟಿಯಾಗುತ್ತದೆ. ಬುರ್ಜೊಟ್ನನ ಸಮಸ್ಯೆಯನ್ನು ಕೇಳಿದ ಆತ 'ಪರ್ವತ ಎಂದರೆ ಜ್ಞಾನಿಗಳು. ಸತ್ತವರು ಎಂದರೆ ಅಜ್ಞಾನಿಗಳು, ಸತ್ತವರಿಗೆ ಸಂಜೀವಿನಿ ಜೀವ ಕೊಡುತ್ತದೆ ಎಂದರೆ ಜ್ಞಾನಿಗಳು ತಮ್ಮ ತಿಳಿವಳಿಕೆಯಿಂದ ಅಜ್ಞಾನಿಗಳಿಗೆ ಪುನರ್ಜನ್ಮ ನೀಡುತ್ತಾರೆಂದು ಅರ್ಥ. ನಮ್ಮ ಹಿರಿಯರು ಹೀಗೆ ಹೇಳಿದ್ದಾರೆ. ಇಂಥ ತಿಳಿವು 'ಪಂಚತಂತ್ರ'ದಲ್ಲಿದೆ. ಅದೇ ಸಂಜೀವಿನಿ, ಅದನ್ನು ತೆಗೆದುಕೊಂಡು ಹೋಗು ಎಂದು ಹೇಳುತ್ತಾನೆ. ಬುರ್ಡೋಯ್ ಪರ್ಷಿಯಾಕ್ಕೆ 'ಪಂಚತಂತ್ರ' ತೆಗೆದುಕೊಂಡು ಹೋಗಿ ಸಾ.ತ. 550ರಲ್ಲಿ ಅದನ್ನು ಪಹಲವಿ ಭಾಷೆಗೆ ಅನುವಾದಿಸುತ್ತಾನೆ. ಮುಂದೆ ಪಂಚತಂತ್ರ ಸಿರಿಯಾಕ್, ಅರಬ್ಬಿ, ಪರ್ಶಿಯನ್, ಯುನಾನಿ, ಲ್ಯಾಟಿನ್, ಜರ್ಮನ್, ಸ್ಲಾವ್, ಇಟಾಲಿಯನ್, ಹೀಬ್ರೂ, ಇಂಗ್ಲಿಷ್ ಹೀಗೆ ಸುಮಾರು 200 ಭಾಷೆಗಳಿಗೆ ಅನುವಾದವಾಗಿದೆ. ಈ ಕಥೆ ಒಂದು ಅದ್ಭುತ ರೂಪಕ. ಸಾಹಿತ್ಯಕ್ಕೆ ಔಷಧೀಯ ಗುಣವಿದೆ ಎಂಬುದನ್ನು; ಅದರ ಜೀವಶಕ್ತಿಯನ್ನು ಈ ಕಥೆ ಸೊಗಸಾಗಿ ಪ್ರತಿಮಿಸುತ್ತದೆ. ಈ ಹಿನ್ನೆಲೆಯಲ್ಲಿ ನನ್ನೆಲ್ಲ ಬರವಣಿಗೆ ರೂಪುಗೊಂಡಿದೆ.
Author
Narahalli Balasubramanyam
Binding
Soft Bound
ISBN-13
9788199270961
Number of Pages
268
Publication Year
2025
Publisher
Abhinava Prakashana
Height
2 CMS
Length
22 CMS
Weight
300 GMS
Width
14 CMS
Language
Kannada