Product Description
೧೯೮೩ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಗಳಿಸಿದ ಯಶವಂತ ಚಿತ್ತಾಲರು ಪಾಲಿಮರ್ ತಂತ್ರಜ್ಞಾನದಲ್ಲಿ ವಿಶೇಷ ಪರಿಣತಿಯನ್ನು ಗಳಿಸಿರುವ ವಿಜ್ಞಾನಿಯಾಗಿದ್ದರೂ, ಪ್ರವೃತ್ತಿಂದ ಸೃಜನಶೀಲ ಸಾಹಿತಿಯಾಗಿದ್ದಾರೆ. ತಮ್ಮ ಹುಟ್ಟೂರಾಗಿರುವ ಹನೇಹಳ್ಳಿ ಮತ್ತು ನೆಲೆಸಿದ ನಗರವಾಗಿರುವ ಮುಂಬೈಗಳನ್ನು ತಮ್ಮ ಸಾಹಿತ್ಯದ ಪ್ರಬಲ ಶಕ್ತಿಗಳನ್ನಾಗಿಸಿಕೊಂಡಿರುವ ಅವರು ಕನ್ನಡದ ಶ್ರೇಷ್ಠ ಬರಹಗಾರರಲ್ಲಿ ಒಬ್ಬರಾಗಿದ್ದಾರೆ; ತಮ್ಮ ಮಹತ್ವದ ಕೃತಿಗಳಿಂದ ಕಥೆ ಮತ್ತು ಕಾದಂಬರಿಗಳ ಕ್ಷೇತ್ರಕ್ಕೆ ಹೊಸ ಆಯಾಮಗಳನ್ನು ಮೂಡಿಸಿರುವ ಹಿರಿಮೆಯೂ ಅವರದಾಗಿದೆ. ಕನ್ನಡದ ಹಿರಿಮೆಯನ್ನು ಇತರ ಭಾಷಾವಲಯಗಳಿಗೆ ವಿಸ್ತರಿಸಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ. ಸೃಜನಶೀಲ ಲೇಖಕ, ವಿಮರ್ಶಕ, ಅನುವಾದಕರಾದ ಡಾ. ಕೆ.ಎಲ್. ಗೋಪಾಲಕೃಷ್ಣಯ್ಯ ಈ ಪುಸ್ತಕದ ಲೇಖಕರು.