ಕೇಶಿರಾಜನ ಶಬ್ದಮಣಿದರ್ಪಣ ಕುರಿತಂತೆ ಡಾ. ಎಂ.ಎಂ. ಕಲಬುರ್ಗಿ ಅವರು ಕೈಗೊಂಡ ಮರುಶೋಧನೆಯ ಫಲ ಈ ಕೃತಿ. ಶಬ್ದಮಣಿದರ್ಪಣ ರಚನೆಯ ಹಿನ್ನೆಲೆ, ಅದನ್ನು ನಂತರ ಸಂಗ್ರಹಿಸಿದವರ ವಿವರ, ಕನ್ನಡದವರು ಸಂಗ್ರಹಿಸಿದ ಪ್ರತಿಗೂ ಮದ್ರಾಸಿನಲ್ಲಿ ದೊರೆತ ಪ್ರತಿಗೂ ಇರುವ ವ್ಯತ್ಯಾಸಗಳು ಮುಂತಾದ ಸ್ವಾರಸ್ಯಕರ ವಿವರಗಳು ಗ್ರಂಥದಲ್ಲಿವೆ