Product Description
ಈ ಕನ್ನಡ ಸಾಹಿತ್ಯಚರಿತ್ರೆ ಒಂದು ವಿಶಿಷ್ಟ ಸಂಪುಟವಾಗಿದೆ. ಕ್ರಿಪೂ. ಮೂರನೆಯ ಶತಮಾನದ ಅಶೋಕನ ಪ್ರಾಕೃತ ಶಾಸನದಲ್ಲಿ ದೊರೆತಿರುವ ‘ಇಸಿಲ’ ಎಂಬ ಮೊಟ್ಟಮೊದಲ ಕನ್ನಡ ಪದದ ಪ್ರಸ್ತಾಪದಿಂದ ಹಿಡಿದು ಕ್ರಿ.ಶ. ಇಪ್ಪತ್ತನೆಯ ಶತಮಾನದವರೆಗಿನ ಪ್ರಾಚೀನ ಸಾಹಿತ್ಯಚರಿತ್ರೆ ಇದರ ಮೊದಲ ವಿಭಾಗ. ಇದರಲ್ಲಿ ಜಾನಪದ ಸಾಹಿತ್ಯವೂ ಸೇರಿದೆ. ಮುಂದೆ ಇಪ್ಪತ್ತನೆಯ ಶತಮಾನದಲ್ಲಿ ಆರಂಭಗೊಂಡು ತೀರ ಈಚಿನವರೆಗೆ ಸೃಷ್ಟಿಯಾದ ಆಧುನಿಕ ಸಾಹಿತ್ಯ ಇದರ ಎರಡನೆಯ ವಿಭಾಗ. ಈ ಆಧುನಿಕ ಸಾಹಿತ್ಯ ವಿಭಾಗದಲ್ಲಿ ಹೊಸಗನ್ನಡದ ಕಾವ್ಯ, ಕಾದಂಬರಿ, ನಾಟಕ, ಸಣ್ಣಕತೆ, ವಿಮರ್ಶೆ, ಸಂಶೋಧನೆ ಮೊದಲಾದ ಹದಿನಾಲ್ಕು ಉಪವಿಭಾಗಗಳ ವಿವರಗಳಿವೆ. ಇವೇ ಅಲ್ಲದೆ ಯಕ್ಷಗಾನ ಸಾಹಿತ್ಯ ಮತ್ತು ಅಮೆರಿಕದಲ್ಲಿ ಕನ್ನಡ ಸಾಹಿತ್ಯ ಎಂಬ ಎರಡು ಹೊಸ ವಿಭಾಗಗಳೂ ಇದರಲ್ಲಿವೆ. ಹೀಗೆ ಇದು ಈಚೆಗೆ ಹೊರಬರುತ್ತಿರುವ ಕನ್ನಡ ಸಾಹಿತ್ಯಚರಿತ್ರೆಯ ಒಂದು ಅಪೂರ್ವ ಸಂಪುಟವಾಗಿದೆ.