Quantity
Product Description
ಈ ಹುಡುಗ ಕಾವ್ಯದ ನಶೆಯನ್ನು ನೆತ್ತಿಗೇರಿಸಿಕೊಂಡಿದ್ದಾನೆ. ಜೀವನದ ಪ್ರತಿಕ್ಷಣವನ್ನೂ ಕವಿತೆಯಾಗಿಸುವ ಉತ್ಸಾಹದಲ್ಲಿದ್ದಾನೆ. ಈ ಉತ್ಸಾಹವನ್ನು ತನ್ನ ಸುತ್ತಲಿನ ಜನರಲ್ಲಿಯೂ ಉಕ್ಕಿಸಲು ಪಣತೊಟ್ಟಿದ್ದಾನೆ. ಹಾಗಾಗಿಯೇ ಕವಿತೆಗಳ ಕಟ್ಟು ಕೈಗಿಡುವ ಮುನ್ನವೇ..
"ಹೇಳುವುದೇನಿದೆ?
ಇಬ್ಬರೂ ಒಟ್ಟಿಗೆ ಕೂತು,
ನಸುಬೆಚ್ಚಗಿನ ಕಾಫಿ ಹೀರುತ್ತಾ,
ಮಾತಿಗಿಳಿಯಿರಿ.."
ಎಂದು ಓದುಗರನ್ನು ಆಹ್ವಾನಿಸುತ್ತಾ, ನಾನು ಕೊನೆಯಲ್ಲಿ ಸಿಗುತ್ತೇನೆ ఎంబ ಆಶ್ವಾಸನೆಯನ್ನು ಕವಿ ನೀಡುತ್ತಾನೆ. ಮನದೊಳಗೆ, ಹೊರಗೆ ಎಲ್ಲೆಲ್ಲೂ ಕುಳಿತು, ನಿಂತು ಕಾಡುವ ಯಾಶಿ ಅವನ ಸಂಗಾತಿ. ಅವಳು ಜತೆಗಿದ್ದಾಗ ಇದೇ ಬಿಸಿ ತಾಕುತ್ತಿತ್ತು, ಈಗವಳು ಸುಂದರ ಕವಿತೆಯಾಗಿದ್ದಾಳೆ ಎನ್ನುವ ಅನಂತ ಅವರು ಇಲ್ಲಿ ಖಾಲಿ ಹಾಳೆಯನ್ನು ಕವಿತೆಯಾಗಿಸಿದ್ದಾರೆ. ಅವಳೆಂಬ ನಿಗೂಢ ಕವಿತೆಯ ಬಗ್ಗೆ ಅಚ್ಚರಿಗೊಂಡಿದ್ದಾರೆ. ಸಹಜವಾಗಿಯೇ ಇಲ್ಲಿ ಕವಿತೆಯ ಮಳೆಯೇ ಸುರಿದಿದೆ. ಆದಾಗ್ಯೂ ಕಾಮನಬಿಲ್ಲು ಮೂಡಲು ಸುರಿಯುವ ಮಳೆಗೆ ಅದರದೇ ಆದ ಹದ ಬೇಕಲ್ಲವೆ? ಅಂತ ಅಪರೂಪದ ಕಾವ್ಯಕನ್ನಿಕೆಗೆ ಕಾಯುವ ತಾಳ್ಮೆ, ಗೆಯ್ಮೆ ಈ ಹುಡುಗನದಾಗಲಿ ಎಂದು ಹಾರೈಸುತ್ತೇನೆ.
ಹಾಂ, ಮರೆಯುವ ಮುನ್ನ ಒಂದು ಮಾತು! ಈ ಹುಡುಗನಿಗೆ ಬಯಸುವ ಮಾದರಿಯ ಹೆಂಡ್ತಿ ಸಿಗದಿರಲಿ ಎಂದು ಪ್ರೀತಿಯಿಂದ ಪ್ರಾರ್ಥಿಸುತ್ತೇನೆ. ಯಾಕೆಂದರೆ ಸಮಸಮಾಜದ ಕನಸಿನ ಕುಡಿಮೀಸೆಯ ಕವಿಯೊಳಗಿನ ಹೆಂಡತಿ ಮಾತ್ರ ಶತಮಾನಗಳಷ್ಟು ಹಿಂದಿನ ಗರತಿ ಗಂಗವ್ವ! ಹಾಗಾಗಿ ಅವರಿಗೆ ಶರಂಪರ ಜಗಳವಾಡಿ, ಸತ್ತು ಹೋಗುವಷ್ಟು ಪ್ರೀತಿಸುವ ಮುದ್ದುರಾಕ್ಷಸಿ ಯಾಶಿಯೇ ಸಂಗಾತಿಯಾಗಲಿ ಎಂದು ಶಪಿಸುತ್ತಿದ್ದೇನೆ. ಇನ್ನು ನೀವುಂಟು, ಅನಂತನ ರಾಶಿ, ರಾಶಿ ಕವಿತೆಗಳುಂಟು!
ಓದುವ ಸುಖ ನಿಮ್ಮದಾಗಲಿ..
Author
Anantha Kunigal
Binding
Soft Bound
Number of Pages
144
Publication Year
2020
Publisher
Avva Pustakalaya
Height
2 CMS
Length
22 CMS
Weight
200 GMS
Width
14 CMS
Language
Kannada