Select Size
Quantity
Product Description
'ಕಮಲಾದಾಸ್ ಕಥೆಗಳು'ಕಮಲಾದಾಸ್ ಅವರ ಮಲಯಾಳಂ ಮೂಲ ಕೃತಿಯಾಗಿದ್ದು ಕೆ.ಕೆ. ಗಂಗಾಧರನ್ ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಕೇರಳದ ಸಾಹಿತ್ಯ ಪ್ರಿಯರಿಗೆ ಇಷ್ಟವಾದ ಲೇಖಕಿ ಮಾಧವಿಕುಟ್ಟಿ ಎಂಬ ಕಮಲಾದಾಸ್. ಕಮಲಾದಾಸ್ ಮಲಯಾಳಂ ಮತ್ತು ಇಂಗ್ಲಿಷ್ ನಲ್ಲೂ ಕತೆ,ಕವನ,ಆತ್ಮಚರಿತೆ,ಕಾದಂಬರಿ ಹಾಗೂ ಇನ್ನೂ ಅನೇಕ ಶಾಖೆಗಳಲ್ಲಿ ಅವರು ತಮ್ಮ ಹೆಸರನ್ನು ದಾಖಲಿಸಿದ್ದಾರೆ.ಅವರ ಬಹುತೇಕ ಕತೆಗಳು ಹೆಣ್ಣಿನ ಅಂತಃಕರಣವನ್ನು ಅನಾವರಣಗೊಳಿಸುತ್ತದೆ. ಗಂಡು-ಹೆಣ್ಣು,ಹೆಣ್ಣು-ಗಂಡು, ಗಂಡು-ಗಂಡು ಪರಸ್ಪರ ಸಂಬಂಧಗಳನ್ನು ಯಾವ ಎಗ್ಗೂ ಇಲ್ಲದೆ ಒಡೆದು ಹೇಳುವ ಜಾಯಮಾನ ಅವರದ್ದು. ಇಲ್ಲಿನ ವಿಚಾರಗಳು ಸುಳಿಗಾಳಿಯಾಗಿ,ಬಿರುಗಾಳಿಯಾಗಿ,ತಿಳಿಗಾಳಿಯಾಗಿ ಓದುಗರ ಮನಸ್ಸಿನಲ್ಲಿ ಸುಳಿದಾಡುತ್ತಿರುತ್ತದೆ. ೩೦ ಕಥೆಗಳ ಗುಚ್ಛವಾಗಿರುವ ಈ ಕೃತಿಯು ತೀವ್ರವಾದ ಭಾಷೆಯನ್ನು ಒಳಗೊಂಡಿದೆ.
Author
K K Gangadharan
Binding
Soft Bound
ISBN-13
9789392230851
Number of Pages
240
Publisher
Ankitha Pusthaka
Height
3 CMS
Length
22 CMS
Weight
300 GMS
Width
14 CMS
Language
Kannada