ಪ್ರೊ ಬಿ ಎ ವಿವೇಕ ರೈ ಅವರ ಬದುಕಿನ ಪಯಣದಲ್ಲಿ ನಾನೂ ಸಹಯಾತ್ರಿ ಎನ್ನುವುದು ನನಗೆ ಹೆಮ್ಮೆಯ ಸಂಗತಿ. ಅವರು ಬದುಕಿದ ರೀತಿಯ ಒಂದಿಷ್ಟು ಮುಖಗಳನ್ನಾದರೂ ನಾನು ಹತ್ತಿರದಿಂದ ಕಂಡಿದ್ದೇನೆ. ನನ್ನ ಮನದ 'ಗಿಳಿಸೂವೆ'ಗೆ ಕಂಡಿದ್ದಕ್ಕಿಂತ ವಿಶೇಷವಾದ, ಅಪರೂಪವಾದ ಲೋಕ ಈ ಕೃತಿಯಲ್ಲಿದೆ.
ನಾಲ್ಕು ಗೋಡೆಗಳ ಒಳಗೂ- ಅದರಾಚೆಗೂ ವಿವೇಕ ರೈ ಕಲಿತಿದ್ದಾರೆ ಹಾಗೂ ಕಲಿಸಿದ್ದಾರೆ. ನಿರಂತರ ಕಲಿಯುವಿಕೆಗೆ ರೈ ಅವರು ಒಂದು ಶ್ರೇಷ್ಠ ಮಾದರಿ. ಈ ಕೃತಿ ನಮ್ಮ ಬದುಕಿನ ಬಾಗಿಲನ್ನೂ ತೆರೆಯುತ್ತದೆ ಎನ್ನುವ ನಂಬಿಕೆ ನನ್ನದು