Select Size
Quantity
Product Description
ಮಂಗಳಾ ಒಬ್ಬ ಒಳ್ಳೆಯ ಬರಹಗಾರ್ತಿ ಎಂದು ನಾನು ಗುರುತಿಸಿದ್ದು ಅವರ ಫೇಸ್ ಬುಕ್ ಬರಹಗಳಿಂದ. ನಂತರ ಅವರನ್ನು ನಮ್ಮ ಅಪರಂಜಿಗೆ ಬರೆಯಿರಿ ಎಂದಾಗ ಸಂತೋಷದಿಂದ ಬರೆದರು, ಬರೆಯುತ್ತಿದ್ದಾರೆ ಮತ್ತು ಇನ್ನು ಮುಂದೂ ಬರೆಯುತ್ತಾರೆ. ಒಂದು ವಸ್ತುವನ್ನು ಸಮಗ್ರವಾಗಿ ದೃಷ್ಟಿಸಿ, ವಿಮರ್ಶಿಸಿ, ವಿಡಂಬನಾತ್ಮಕವಾಗಿ ಬಿಂಬಿಸುವುದು ಮಂಗಳ ಅವರಿಗೆ ಸಿದ್ಧಿಸಿದೆ. ಹೀಗಾಗಿ ಅವರ ಯಾವುದೇ ಬರಹಗಳನ್ನು ಓದುವುದು ಒಂದು ಖುಷಿಯ ಸಂಗತಿ. ಲೇಖಕಿಗೆ (ಮತ್ತು ಲೇಖಕನಿಗೂ) ಪರಿಸರವನ್ನು ಸೂಕ್ಷ್ಮವಾಗಿ ಅವಲೋಕನ ಮಾಡಿಕೊಂಡು ಹೋಗುವ ಗುಣದ ಜೊತೆಗೆ ನೆನಪಿನ ಶಕ್ತಿಯೂ ಇರಬೇಕು. ಆಗ ಮಾತ್ರ ಯಾವುದೇ ಒಂದು ವಿಷಯವನ್ನು ಸಮಗ್ರವಾಗಿ ವಿಶ್ಲೇಷಣೆ ಮಾಡುವುದು ಸಾಧ್ಯವಾಗುತ್ತದೆ. ಇಂತಹ ಮನಸ್ಥಿತಿ ಮಂಗಳಾಗೆ ಇದೆ. (ಮನಸ್ಥಿತಿ ಎನ್ನುವ ಲೇಖನವೂ ಈ ಸಂಗ್ರಹದಲ್ಲಿದೆ) ಈ ನನ್ನ ಮಾತುಗಳಿಗೆ ಉದಾಹರಣೆಯಾಗಿ ಫೋನ್ ಮಾಡ್ಕೊಂಡು ಬನ್ನಿ, ನಾನು ನಿಮ್ಮ ಪೆನ್ನು, ಜೀವನದಲ್ಲಿ ಶಿಸ್ತು, ಮಾತಿಗೇಕೆ ಬಣ್ಣ, ವ್ಯಕ್ತಿಗತ ಶಿಸ್ತು, ಇತ್ಯಾದಿ. ಇವರು ಗೀಳು ಬೇನೆ, ವಾಹನ ಬಳಸುವಾಗ ಇರಬೇಕಾದ ಜಾಗ್ರತೆ , ಹೈಸ್ಕೂಲ್ ಕಾಲೇಜುಗಳಲ್ಲಿ ಮಕ್ಕಳಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯಗಳ ವ್ಯಸನ ಮುಂತಾದ ಗಂಭೀರ ಮತ್ತು ಸಾಮಾಜಿಕ ಜಾಗ್ರತೆಯನ್ನುಂಟು ಮಾಡುವ ವಿಷಯಗಳ ಕುರಿತೂ ಚನ್ನಾಗಿ ಬರೆದಿದ್ದಾರೆ.
ಲೇಖಕಿಗೆ ಬಹಳ ಒಳ್ಳೆಯ ಬದ್ಧತೆ ಇದೆ, ಶಿಸ್ತು ಇದೆ, ಪ್ರತಿಪಾದಿಸುವ ವಿಷಯಗಳ ಬಗೆಗೆ ಆಳವಾದ ಅಧ್ಯಯನಶೀಲತೆ ಇದೆ. ಹೀಗಾಗಿ ಇಲ್ಲಿನ ಲೇಖನಗಳೆಲ್ಲವೂ ಸುಂದರ ಮತ್ತು ಮಧುರ. ಓದುಗರನ್ನು ಸೆಳೆಯುವುದರಲ್ಲಿ ಎರಡು ಮಾತಿಲ್ಲ. ಲೇಖಕಿಗೆ ಅಭಿನಂದನೆಗಳು. ಸಾಹಿತ್ಯ ಲೋಕದಲ್ಲಿ ಇವರು ಒಬ್ಬ ಧೃವತಾರೆಯಾಗಿ ಮಿಂಚಲಿ ಎನ್ನುವುದು ನನ್ನ ಆಶಯ.
ಬೇಲೂರು ರಾಮಮೂರ್ತಿ
ಶತಕೃತಿಕರ್ತೃ, ಆಧ್ಯಾತ್ಮ ಚಿಂತಕರು ಮತ್ತು ಹಾಸ್ಯೋಪನ್ಯಾಸಕರು
Weight
300 GMS
Length
22 CMS
Author
Mangala M Nadig
Publisher
New Wave Books
Publication Year
2023
Number of Pages
282
ISBN-13
9788196764791
Binding
Soft Bound
Language
Kannada