Product Description
೧೯೯೪ರಲ್ಲಿ ತಮ್ಮ ‘ತಲೆದಂಡ’ ನಾಟಕಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಗಳಿಸಿದ ಗಿರೀಶ್ ಕಾರ್ನಾಡ್ ಅವರು ನಾಟಕ ಕ್ಷೇತ್ರದಲ್ಲಿನ ಅಪೂರ್ವ ಸಾಧನೆಗಾಗಿ ರಾಷ್ಟೀಯ, ಅಂತರರಾಷ್ಟ್ರೀಯ ಖ್ಯಾತಿಯನ್ನು ಗಳಿಸಿರುವಂಥವರು. ಅವರ ನಾಟಕಗಳು ಪುರಾಣ, ಇತಿಹಾಸ ಮತ್ತು ಜಾನಪದ ವಸ್ತು ಮತ್ತು ತಂತ್ರಗಳನ್ನು ಆಶ್ರುಸಿದ್ದರೂ, ರಂಗಸಾಧ್ಯತೆಗಳನ್ನು ವಿಸ್ತರಿಸುವ ಅಪರೂಪದ ಸಾಧನೆಗಳಿಗೆ ಅವನ್ನೇ ಬಳಸಿಕೊಂಡಿವೆ. ಹಳೆಯ ಕಥಾವಸ್ತುಗಳನ್ನೇ ಆಯ್ದುಕೊಂಡಿದ್ದರೂ ಸಮಕಾಲೀನ ಸನ್ನಿವೇಶಗಳಿಗೆ ಹಾಗೂ ಸಮಸ್ಯೆಗಳಿಗೆ ಅವುಗಳನ್ನು ಸಂಬಂಧಿಸಿರುವುದು ಅವರ ವೈಶಿಷ್ಟ್ಯವಾಗಿದೆ. ಮೈಸೂರು ವಿಶ್ವವಿದ್ಯಾನಿಲಯದ ಲಲಿತ ಕಲೆಗಳ ಕಾಲೇಜಿನಲ್ಲಿ ನಾಟಕಶಾಸ್ತ್ರ ವಿಭಾಗದಲ್ಲಿ ಪ್ರವಾಚಕರಾಗಿರುವ ಡಾ. ಮೀರಾ ಮೂರ್ತಿ ಈ ಪುಸ್ತಕದ ಲೇಖಕರು.