Quantity
Product Description
ದಕ್ಷಿಣ ಭಾರತದ ಅವೈದಿಕ ಸಮುದಾಯದ ಚಳವಳಿಗೆ ಪ್ರಧಾನವಾಗಿ ಎರಡು ಮಾದರಿಗಳಿವೆ. ಒಂದು ಪೆರಿಯಾರ್ ಮಾದರಿ, ಮತ್ತೊಂದು ನಾರಾಯಣಗುರು ಮಾದರಿ. ಪೆರಿಯಾರ್ ಮಾದರಿ ಪ್ರಧಾನ ಸಂಸ್ಕೃತಿಯ ಸಂಪ್ರದಾಯದ ಯಾವೊಂದು ಮೌಲ್ಯಗಳನ್ನಾಗಲಿ, ಸಂಕೇತಗಳನ್ನಾಗಲಿ ಒಪ್ಪಿಕೊಳ್ಳಲಿಲ್ಲ. ಪ್ರತಿಸಂಸ್ಕೃತಿಯ ಸೃಷ್ಟಿಗಾಗಿ ಪ್ರಯತ್ನಿಸಿತು. ಆದರೆ ನಾರಾಯಣಗುರು ಮಾದರಿ ಪೆರಿಯಾರ್ ಮಾದರಿಯಂತೆ ಸಿಟ್ಟಿನ, ಆಕ್ರೋಶದ, ಸಮಗ್ರ ತಿರಸ್ಕಾರದ ರೂಪವನ್ನು ಪಡೆಯಲಿಲ್ಲ. ಇದೊಂದು ರೀತಿ ಧಾರ್ಮಿಕ ಸಾಮಾಜಿಕ ಸುಧಾರಣಾ ಚಳವಳಿಯ ರೂಪವನ್ನು ಪಡೆಯಿತು. ಹಿಂದೂ ಧರ್ಮದ ಸಂವಿಧಾನದೊಳಗಿದ್ದೇ ಬದಲಾವಣೆಗೆ ಪ್ರಯತ್ನಿಸಿತು. ಕುವೆಂಪು ಅವರ ನಿಲವು ಪೆರಿಯಾರರಂತೆ ಹಿಂದೂ ಧರ್ಮದ ಬಗ್ಗೆ ಸಮಗ್ರ ದ್ವೇಷ, ತಿರಸ್ಕಾರದಿಂದ ಕೂಡಿಲ್ಲ. ಇವರ ನಿಲವು ನಾರಾಯಣ ಗುರು ಅವರ ನಿಲುವಿಗೆ ಹತ್ತಿರ. ಹಿಂದೂ ಧರ್ಮದೊಳಗಿದ್ದೇ ಅದರಲ್ಲಿ ಸುಧಾರಣೆಯನ್ನು ತರುವ ಪ್ರಯತ್ನದಂತೆ ಕಾಣಿಸುತ್ತದೆ. ಕುವೆಂಪು ಅವರ 'ಮಂತ್ರ ಮಾಂಗಲ್ಯ'ದ ಪರಿಕಲ್ಪನೆಯಲ್ಲಿಯೂ ಪರಂಪರೆಯ ಅತ್ಯುತ್ತಮ ಅಂತಗಳನ್ನು ಉಳಿಸಿಕೊಂಡು ಪ್ರಗತಿಪರ ಬದಲಾವಣೆಯ ಮೂಲಕ ಹೊಸರೂಪ ನೀಡುವ ಪ್ರಯತ್ನವನ್ನು ಕಾಣುತ್ತೇವೆ. ಅವರ ಈ ವಿಧಿ ವಿಧಾನ ವಿವಾಹದ ಅತ್ಯುತ್ತಮ ಸಂವಿಧಾನವಾಗಿದೆ. ಇದನ್ನು ಸಾಧ್ಯವಾಗಬಹುದು... ಸಾಧ್ಯವಾದರೆ ಸಮಾಜದಲ್ಲಿ ಇತ್ಯಾತ್ಮಕ ಬದಲಾವಣೆ ಸಾಧ್ಯವಾಗಬಹುದು.....
Binding
Soft Bound
Number of Pages
100
Publication Year
2025
Publisher
Abhinava Prakashana
Author
Narahalli Balasubramanyam
Height
1 CMS
Length
22 CMS
Weight
200 GMS
Width
14 CMS
Language
Kannada