Select Size
Quantity
Product Description
ವ್ಯಾಸರಾವ್ ನಿಂಜೂರ್ ಅವರ ಸಮಗ್ರ ಕಥೆಗಳನ್ನು ಕುರಿತು ಪ್ರಸಿದ್ಧ ಲೇಖಕರಾದ ಜಯಂತಕಾಯ್ಕಿಣಿ ಹಾಗೂ ಈಶ್ವರಯ್ಯ ಅವರ ಅಭಿಪ್ರಾಯ ಹೀಗಿದೆ .
ಜೀವರಸಾಯನ ಶಾಸ್ತ್ರಜ್ಞರಾಗಿ,ಅಣುವಿಜ್ಞಾನಿಯಾಗಿ,ಮುಂಬಯಿಗನಾಗಿ,ಬೆಳೆದ ನಿಂಜೂರರ ಕಥೆಗಳ ಲೋಕವೂ ತನ್ನ ಕಾಣ್ಕೆಯಲ್ಲಿ,ವಿವರಗಳಲ್ಲಿ ವಿಸ್ತಾರದ ಜತೆಗೆ ಧ್ವನಿವಿಸ್ತಾರವನ್ನೂ ಪಡೆಯುತ್ತ ಹೋಗಿದೆ.ಅದ್ಭುತ ಪಾತ್ರಚಿತ್ರಣ,ಅನುಭವದಿಂದಲೇ ಬರಬಹುದಾದ ವಾತಾವರಣ ಸೃಷ್ಟಿ,ತೀರ್ಪುಗಾರಿಕೆಯ ತೆವಲಿಲ್ಲದ ಮುಕ್ತನೋಟ ಮತ್ತು ನವಿರಾದ ತುಂಟ ವಿನೋದಗಳಿಂದ ಮನವನ್ನು ಕರಗಿಸಿ ಹಿಗ್ಗಿಸಬಲ್ಲ ನಿಂಜೂರರ ಕಥೆಗಳು,ದಕ್ಷಿಣ ಕನ್ನಡದ ಗ್ರಾಮ ಮತ್ತು ಮುಂಬಯಿಯ ನಡುವೆ ನಿಗೂಢ ನೈಟ್ ಬಸ್ಸುಗಳಂತೆ ಓಡಾಡುತ್ತಿರುತ್ತವೆ.ಎಷ್ಟೆಲ್ಲ ಅಪ್ಪಟ ಜೀವಿಗಳನ್ನು ತನ್ಮಯತೆಯಿಂದ ಕೆಮ್ಮಣ್ಣಿನ ಬೆರಳುಗಳಿಂದ ರೂಪಿಸುವ ನಿಂಜೂರರ ಕಥೆಗಾರಿಕೆ,ಕಳೆದ ಆರು ದಶಕಗಳಲ್ಲಿ ಬಂದು ಹೋದ ಕನ್ನಡದ ವಿವಿಧ ಸಾಹಿತ್ಯಕ ಚಳುವಳಿಗಳ ಮೇಲುಸ್ತರದ ಪ್ರಭಾವಗಳಿಗೆ ಆಮಿಷಗಳಿಗೆ ಕಿಂಚಿತ್ತೂ ಬಲಿಯಾಗದೇ,ತನ್ನದೇ ಆದ ಗಟ್ಟಿ ಒಳನೋಟಕ್ಕೆ ಮುಕ್ತ ಜೀವನ ದರ್ಶನಕ್ಕೆ ಪಕ್ಕಾಗುತ್ತ ಬಂದ ರೀತಿ ಹೃದ್ಯವಾಗಿದೆ
Weight
500 GMS
Width
20 CMS
Length
22 CMS
Author
Dr Vyasarao Ninjoor
Publisher
Ankitha Pusthaka
Number of Pages
607
Publication Year
2022
Binding
Soft Bound
ISBN-13
9789392230233
Language
Kannada