Quantity
Product Description
ಸಂವಹನ ಮತ್ತು ಅಭಿವ್ಯಕ್ತಿಯ ಪ್ರಮುಖ ಸಾಧನವಾದ ಭಾಷೆ ಒಂದು ಸಮುದಾಯದ ಸಾಂಸ್ಕೃತಿಕ ಅನನ್ಯತೆಯಾಗಿ ಪ್ರತಿನಿಧಿಸುತ್ತದೆ. ಜೊತೆಗೆ ಪರಂಪರೆಯನ್ನು ಸಂರಕ್ಷಿಸುವಷ್ಟು ನಿರ್ಣಾಯಕ ಪಾತ್ರವನ್ನೂ ವಹಿಸುತ್ತದೆ. ಆಧುನಿಕತೆಯ ಪ್ರಭಾವಕ್ಕೊಳಗಾದ ಕೆಲವು ಬುಡಕಟ್ಟು ಸಮುದಾಯಗಳ ಬದುಕು ಭಾಷೆಯನ್ನೊಳಗೊಂಡ ಸಂಸ್ಕೃತಿ ಸ್ಥಿತ್ಯಂತರಗೊಳ್ಳುತ್ತಿವೆ. ಕೆಲವು ಬುಡಕಟ್ಟುಗಳು ತಮ್ಮ ಮೂಲ ನೆಲೆಯಾದ ಕಾಡು ಮತ್ತು ಅದರ ಆಸುಪಾಸಿನ ಪ್ರದೇಶದಲ್ಲಿ ವಾಸಿಸುತ್ತಿವೆ. ಕೆಲವು ಬುಡಕಟ್ಟುಗಳು ಅಲೆಮಾರಿ ಜನಾಂಗಗಳಾಗಿ ತಮ್ಮ ಭಾಷೆಗಳೊಂದಿಗೆ ಸಾಗುತ್ತಿವೆ. ಇವುಗಳ ಪೈಕಿ ಕೆಲವಾದರೂ ತಮ್ಮ ಮೂಲ ಸ್ವರೂಪವನ್ನು ಉಳಿಸಿಕೊಂಡ ಸಮುದಾಯಗಳೂ ಇವೆ. ಹಾಗೆ ಕೆಲವು ಬುಡಕಟ್ಟುಗಳು ದ್ವಿಭಾಷಿಕರಾಗಿಯೂ ವ್ಯವಹರಿಸುವುದನ್ನು ಕಾಣಬಹುದು. 'ಬೇಡ ಬುಡಕಟ್ಟಿನ ಭಾಷಿಕ ಸಂಕಥನ' ಬಯಲುಸೀಮೆಯ ಬೇಡ ಬುಡಕಟ್ಟಿನ ಸಮಾಜೋಭಾಷಿಕ ಅಧ್ಯಯನಕ್ಕೊಂದು ಮಾದರಿ ಎನ್ನಬಹುದಾದ ಸಂಶೋಧನಾ ಕೃತಿ ಇದಾಗಿದೆ. ಪರಂಪರೆ ಮತ್ತು ವರ್ತಮಾನದ ಮಧ್ಯೆ ಸಹಜವಾಗಿಯೇ ಏರ್ಪಡುವ ಪಲ್ಲಟಗಳನ್ನು ತಾತ್ವಿಕವಾಗಿ ವಿವೇಚಿಸಿದ್ದಾರೆ. ಗಡಿ ಪ್ರದೇಶಗಳಲ್ಲಿನ ಭಾಷಾಸಂಪರ್ಕ ಮತ್ತು ಭಾಷಾಮಿಶ್ರಣಕ್ಕೆ ಕಾರಣವಾಗುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸನ್ನಿವೇಶಗಳು, ಅವುಗಳ ಮಧ್ಯ ನಡೆಯುವ ನುಡಿಬೆರಕೆ ಮತ್ತು ನುಡಿಜಿಗಿತಗಳು ಹೇಗೆ ರೂಪುಗೊಳ್ಳುತ್ತವೆ ಎನ್ನವುದನ್ನು ತಾರ್ಕಿಕವಾಗಿ ನಿರೂಪಿಸಿದ್ದಾರೆ. ಡಾ. ಆಂಜನೇಯ ಉರ್ತಾಳ್ ಅವರ ವ್ಯಾಪಕವಾದ ಕ್ಷೇತ್ರಕಾರ್ಯದ ಜೊತೆಗೆ ಸಾಮಾಜಿಕ, ಜಾನಪದ, ಭಾಷಿಕ ಕೃತಿಗಳ ವಿಸ್ತ್ರತ ಅಧ್ಯಯನವು ಈ ಕೃತಿಯ ಗುಣಾತ್ಮಕ ಅಂಶವಾಗಿದೆ. ವ್ಯಾವಹಾರಿಕ ಭಾಷೆಯ ವಿಶ್ಲೇಷಣೆ ಮತ್ತು ವಿಷಯಪ್ರತಿಪಾದನೆಯಲ್ಲಿ ಕೃತಿಕಾರರು ತೋರಿರುವ ಸಮತೋಲನ ಮನೋಧರ್ಮ, ಶಿಸ್ತು, ಬದ್ಧತೆಯು ಕೃತಿಯ ಮೌಲ್ಯವನ್ನು ಹೆಚ್ಚಿಸಿವೆ. ಈ ಎಲ್ಲಾ ಅಂಶಗಳಿಂದ ಇದು ಸಮುದಾಯದ ಪ್ರಾದೇಶಿಕ ಭಾಷಿಕ ಸಂಸ್ಕೃತಿಯನ್ನು ಕುರಿತಾದ ಮುಖ್ಯ ಕೃತಿಯಾಗಿದೆ. ಪ್ರೊ. ಕರಿಯಪ್ಪ ಮಾಳಿಗೆ
Author
Dr Anjaneya Urtal
Binding
Soft Bound
Number of Pages
200
Publication Year
2025
Publisher
Srushti Publications
Height
2 CMS
Length
22 CMS
Weight
200 GMS
Width
14 CMS
Language
Kannada