Product Description
ಇಂದಿನ ನಮ್ಮ ಮಕ್ಕಳು ಹುಟ್ಟುತ್ತಲೇ ಕಂಪ್ಯೂಟರ್, ಮೊಬೈಲ್, ಐ ಪ್ಯಾಡ್, ಐ ಫೋನ್ ಮುಂತಾದ ಗ್ಯಾಡ್ಜೆಟ್ಗಳ ಬಗ್ಗೆ ಪರಿಚಿತರಾಗಿ, ದಿನದಿನಕ್ಕೂ ಪರಿಣತರಾಗಿ ಮಾರ್ಪಡುತ್ತಿದ್ದಾರೆ. ಇಂದಿನ ವಿದ್ಯಾಭ್ಯಾಸದ ಕ್ರಮವೂ ಅವರನ್ನು ‘ಮಾಹಿತಿ ಕಣಜ’ವನ್ನಾಗಿಸುತ್ತಿದೆ. ಆದರೆ ಅವರಲ್ಲಿ ಒಳಗೊಳಗೇ ಮನೋಬಲದ ಕುಸಿತವನ್ನು ಕಾಣುತ್ತಿದ್ದೇವೆ. ಹದಿಹರೆಯದ ಮಕ್ಕಳಷ್ಟೇ ಅಲ್ಲ, ನವಉದ್ಯೋಗಸ್ಥರೂ ನವವಿವಾಹಿತರೂ ಪುಟ್ಟಮಕ್ಕಳ ಪೋಷಕರೂ ನಡುವಯಸ್ಸಿನವರೂ ಕಡೆಗೆ ವೃದ್ಧರೂ ಕೂಡ ಬದುಕಿನಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸಲು ಮನೋಬಲದ ಅಭಾವದಿಂದಾಗಿ ಪರಿತಪಿಸುತ್ತಿದ್ದಾರೆ. ಇಂಥವರಿಗೆಲ್ಲಾ ಬೆಳಕು ತೋರಿಸುವ ಕೃತಿ ಇದಾಗಿದೆ. ನಕಾರಾತ್ಮಕ ಧೋರಣೆಗಳಾದ ಅನುಮಾನ, ಸಂಬಂಧಗಳಿಂದ ವಿಮುಖತೆ, ದ್ವೇಷಸಾಧನೆ, ಭಾವೋದ್ವೇಗ, ಸಮಾಜಬಾಹಿರ ಚಟುವಟಿಕೆಗಳಲ್ಲಿ ಆಸಕ್ತಿ - ಇಂಥವುಗಳಿಂದ ಪಾರಾಗುವ ಉಪಾಯಗಳನ್ನೂ ಇಲ್ಲಿ ಸೂಚಿಸಲಾಗಿದೆ.