Product Description
ಮಾಡಿ ಕಲಿ ಪುಸ್ತಕದಲ್ಲಿ ಅತಿ ಕುತೂಹಲಕರ ಚಟುವಟಿಕೆಗಳಾದ ಕಾಗದ ಮಡಿಕೆಗಳ ಮೂಲಕ ಜ್ಯಾಮಿತಿ, ಆಟಿಕೆಗಳು, ಟ್ಯಾನ್ ಗ್ರಾಮ್ ಗಳು, ಪಂಪ್, ಟೋಪಿಗಳು, ಪ್ರಯೋಗಗಳು ಮತ್ತು ಸರಳ ವಿಜ್ಞಾನ ಮಾದರಿಗಳು ಇವೆ. ಅತಿ ಸರಳ ವಸ್ತುಗಳಿಂದ ವಿಜ್ಞಾನ ಅರಿಯಲು ಸಾಧ್ಯತೆಗಳನ್ನು ತೆರೆದಿಟ್ಟೆದೆ. ಸಂಪನ್ಮೂಲ ಕೊರತೆಯಿಂದ ನಮ್ಮ ದೇಶಕ್ಕೆ, ವೆಚ್ಚವಿಲ್ಲದ ವಸ್ತುಗಳಿಂದ ಪ್ರಯೋಗಗಳನ್ನು ಉತ್ತಮಪಡಿಸುವುದು ಹೆಚ್ಚು ಭರವಸೆ ಮೂಡಿಸುತ್ತದೆ. ಇಲ್ಲಿನ ಸಂದೇಶವು ಸ್ಪಷ್ಟವಾಗಿದೆ - ಅತಿ ಕಡಿಮೆ ವೆಚ್ಚದಲ್ಲಿ ಮಕ್ಕಳು ವಿಜ್ಞಾನ ಅಧ್ಯಯನ ಕೈಗೊಳ್ಳಬಹುದು. ಪತ್ರಿಕೆಗಳಿಂದ ಟೋಪಿ ಮಾಡಬಹುದು. ಜ್ಯಾಮಿತಿ ಕಲಿಯಲು ಒರಿಗಾಮಿ ಕಲೆ ಅತಿಸೂಕ್ತ, ಫಿಲ್ಮ್ ಡಬ್ಬಿಗಳು, ಕುಡಿಯುವ ನೀರಿನ ಬಾಟಲು, ರಬ್ಬರ್ ಚಪ್ಪಲಿ, ಡಬ್ಬಿ ಮುಚ್ಚಳಗಳು ಸುಂದರ ಆಟಿಕೆಗಳಿಗೆ ಬಳಕೆಯಾಗುತ್ತವೆ. ಟ್ಯಾನ್ಗ್ರಾಮ್ಗಳಿಂದ, ಬೀಜಗಳಿಂದ, ಕಲ್ಲುಗಳಿಂದ, ಎಲೆಗಳಿಂದ ಮತ್ತು ಹೆಬ್ಬೆರಳ ಗುರುತಿನಿಂದ ವಿನ್ಯಾಸಗಳನ್ನು ರಚಿಸುವುದು ಮುದ ನೀಡುವ ಆಟವಷ್ಟೇ ಅಲ್ಲ, ಅತಿ ಸೃಜನಶೀಲ ತೃಪ್ತಿ ನೀಡುವ ಚಟುವಟಿಕೆಗಳಾಗಿವೆ. ಈ ಪುಸ್ತಕದಲ್ಲಿ ಉದಾರ ಮರ, ಗಿಣಿಗೊಂದು ತಾಲೀಮು, ಸಂಖ್ಯೆಗಳನ್ನು ಪ್ರೀತಿಸಿದವನು, ಎಚ್ಚರಿಕೆ: ಶಾಲೆಯಿದೆ! ಇನ್ನೂ ಮುಂತಾದ ಅನೇಕ ಉತ್ತೇಜಕ ಕಥೆಗಳಿವೆ. ಈ ಕಥೆಗಳು ಶಿಕ್ಷಣ, ಶಾಂತಿ, ಗಣಿತ ಮತ್ತು ಪರಿಸರದ ಕುರಿತಾಗಿವೆ.