Product Description
ಥಾಮಸ್ ಆಲ್ವಾ ಎಡಿಸನ್ ಬಲ್ಬನ್ನು ಉತ್ಪಾದಿಸಿದಾಗ ಅದರ ಬೆಲೆ ಒಂದು ಡಾಲರ್. ಎಡಿಸನ್ 40 ಸೆಂಟಿಗೆ ಬಲ್ಬನ್ನು ಮಾರತೊಡಗಿದ. ಒಂದು ಬಲ್ಬಿಗೆ 60 ಸೆಂಟು ನಷ್ಟವಾಗುತ್ತಿತ್ತು. ಎಡಿಸನ್ ಜೊತೆಗಾರರು ಬಲ್ಬಿಗೆ ಒಂದು ಡಾಲರ್ ಬೆಲೆ ಇಡಲು ಒತ್ತಾಯಿಸಿದರು. ಎಡಿಸನ್ ಅವರ ಮಾತನ್ನು ಕೇಳದೆ ಬ್ಯಾಂಕಿಗೆ ಹೋಗಿ ಮತ್ತಷ್ಟು ಸಾಲ ತಂದು ಬಲ್ಬ್ ಉತ್ಪಾದಿಸಿ ಮತ್ತೆ 40 ಸೆಂಟಿಗೆ ಮಾರಿದ. ಉತ್ಪಾದನೆ ಹೆಚ್ಚಾದ ಕಾರಣ, ಪ್ರತಿ ಬಲ್ಬ್ ತಯಾರಿಸಲು ಕೇವಲ 60 ಸೆಂಟ್ ಸಾಕಾಗುತ್ತಿತ್ತು. 60 ಸೆಂಟ್ ಬೆಲೆಯ ಬಲ್ಬನ್ನು ಎಡಿಸನ್ 40 ಸೆಂಟಿಗೆ ಮಾರತೊಡಗಿದ. ಮತ್ತೆ ಸಾಲಕ್ಕಾಗಿ ಬ್ಯಾಂಕಿನ ಬಳಿ ಹೋದ. ಈ ನಷ್ಟವ್ಯಾಪಾರಕ್ಕೆ ಸಾಲ ಕೊಡಲು ಬ್ಯಾಂಕ್ ಸಿದ್ಧವಿರಲಿಲ್ಲ. ಆದರೆ ಎಡಿಸನ್ ತನ್ನ ಕಾರ್ಖಾನೆಯನ್ನೇ ಒತ್ತೆಯಿಡುವುದಾಗಿ ಹೇಳಿ ಸಾಲ ತಂದು ಬಲ್ಬುಗಳನ್ನು ಉತ್ಪಾದಿಸಿದ. ಲಕ್ಷಾಂತರ ಬಲ್ಬುಗಳನ್ನು ತಯಾರಿಸಿದಾಗ, ಅದರ ತಯಾರಿಕಾ ವೆಚ್ಚ 20 ಸೆಂಟುಗಳಾಯಿತು. ಎಡಿಸನ್ 20 ಸೆಂಟುಗಳ ಬಲ್ಬನ್ನು 40 ಸೆಂಟುಗಳಿಗೆ ಮಾರಿದ! ಅದುವರೆಗೂ ಅವನಿಗಾಗಿದ್ದ ನಷ್ಟವೆಲ್ಲ ಒಮ್ಮೆಲೇ ಲಾಭವಾಗಿ ಪರಿಣಮಿಸಿತ್ತು!