Product Description
ಸೃಷ್ಟಿಯ ಅದ್ಭುತಗಳಲ್ಲೊಂದು ನಮ್ಮ ಶರೀರ. ನಾವು ಎಚ್ಚರವಾಗಿರುವಾಗಲೂ ನಿದ್ರಿಸುತ್ತಿರುವಾಗಲೂ ತನ್ನ ಕೆಲಸ ನಿರ್ವಹಿಸುವ ಹೃದಯ ಒಂದು ಅಚ್ಚರಿ ಹುಟ್ಟಿಸುವ ಯಂತ್ರ. ಶ್ವಾಸಕೋಶ, ಮಿದುಳು, ಕಣ್ಣು, ಮೂಗು, ಕಿವಿ, ಜಠರ, ಮೂಳೆ, ರಕ್ತನಾಳಗಳು, ನರಮಂಡಲ, ಚರ್ಮ - ಹೀಗೆ ಒಂದೊಂದು ನಿರ್ದಿಷ್ಟ ಕಾರ್ಯ ನಿರ್ವಹಿಸುವ ಪ್ರತಿಯೊಂದು ಅಂಗ ಎಷ್ಟು ಅದ್ಭುತ ರೀತಿಯಲ್ಲಿ ಸೃಷ್ಟಿಯಾಗಿದೆ ಎಂಬುದು ತಿಳಿದಾಗ ನಮಗೆ ಆಶ್ಚರ್ಯವಾಗುತ್ತದೆ. ನಮ್ಮ ಶರೀರದ ಬಗೆಗೆ ತಿಳಿವಳಿಕೆ ಹೆಚ್ಚಿದಂತೆ, ನಮ್ಮ ಆರೋಗ್ಯ ರಕ್ಷಿಸಿಕೊಳ್ಳುವ ಉಪಾಯಗಳೂ ನಮಗೆ ತಿಳಿಯುತ್ತವೆ. ಈ ಪುಸ್ತಕ ನಿಮಗೆ ಶರೀರದ ಅಂಗರಚನೆಯನ್ನು ವಿವರಿಸುತ್ತದೆ. ಅಂಗಾಂಗಗಳ ಕೆಲಸ ಚಟುವಟಿಕೆಗಳನ್ನು ತಿಳಿಸುತ್ತದೆ. ಸಾಮಾನ್ಯ ಆರೋಗ್ಯ ಸಮಸ್ಯೆಗಳನ್ನು ಚಿತ್ರಿಸುತ್ತದೆ. ಹಾಗೆಯೇ ಅವುಗಳ ನಿವಾರಣೋಪಾಯಗಳನ್ನೂ ನಿಮ್ಮ ಗಮನಕ್ಕೆ ತರುತ್ತದೆ. ಆರೋಗ್ಯ ಭಾಗ್ಯ ನಿಮ್ಮದಾಗುತ್ತದೆ.
ನಮ್ಮ ಶರೀರದ ಬಗೆಗೆ ತಿಳಿವಳಿಕೆ ಹೆಚ್ಚಿದಂತೆ, ನಮ್ಮ ಆರೋಗ್ಯ ರಕ್ಷಿಸಿಕೊಳ್ಳುವ ಉಪಾಯಗಳೂ ನಮಗೆ ತಿಳಿಯುತ್ತವೆ. ಆಗ ಆರೋಗ್ಯವೇ ಭಾಗ್ಯ ಎಂಬ ಮಾತು ಅರ್ಥಪೂರ್ಣವಾಗುತ್ತದೆ.