Product Description
ಜೋಗಿಯ ಬರವಣಿಗೆಯ ವೈವಿಧ್ಯತೆ ಎಷ್ಟಿದೆ ಅಂದರೆ ಅದನ್ನು ‘ಜೋಗಿ ಸಾಹಿತ್ಯ’ ಎಂದು ಕರೆದುಬಿಡಬಹುದು. ಅವರ ಭಾಷೆಗೆ ಒಂದು ಅಪರೂಪದ ಹದವಿದೆ. ಅದು ಓದುಗನನ್ನು ಗೆಳೆತನದಿಮ್ದ ತೆಕ್ಕೆಗೆ ತೆಗೆದುಕೊಂಡು ಓದಿನ ಜೊತೆಜೊತೆಗೇ ತನ್ನೊಡನೆ ಕರೆದೊಯ್ಯುವಂಥಾದ್ದು. ಅಂಕಣದ ಅಥವಾ ಕತೆಯ ಅಥವಾ ಕಾದಂಬರಿಯ ವಾತಾವರಣದಲ್ಲಿ ಲೀನವಾಗಿಸಿಬಿಡಾಬಲ್ಲಂಥದ್ದು. ಆ ಹಂತದಲ್ಲಿ ಅದು ಎಲ್ಲವನ್ನೂ ನಂಬಿಸಬಲ್ಲ ಒಂದು ಪ್ರಬಲ ಸಾಧನವಾಗಿಬಿಡುತ್ತದೆ.
ಹೀಗಾಗುವುದರಿಂದಲೇ ಜೋಗಿ ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುತ್ತಲೇ, ಸಾಮಾನ್ಯವಾಗಿ ನಾವು ಬಲ್ಲ, ನಾವು ಕಾಣವಂಥ ಅಂಕಣಗಳ ಎಲ್ಲಾ ಮಿತಿಗಳನ್ನು ದಾಟಿಬಿಡುತ್ತಾರೆ. ಅವರ ಅಂಕಣಗಳನ್ನು ಓದಿದಾಗ ಒಂದು ಕಥೆಯನ್ನೋ, ಕಾದಂಬರಿಯ ಒಂದು ತುಣುಕನ್ನೋ ಓದಿದ ಅನುಭವವಾಗುವುದೂ, ಅವರ ಅಂಕಣಗಳನ್ನು ಮತ್ತೆ ಮತ್ತೆ ಓದಬೇಕೆನಿಸುವುದೂ ಇದೇ ಕಾರಣದಿಂದಲೇ. ಆರಿಸಿಕೊಂಡ ವಿಷಯ ಎಷ್ಟೇ ಜಟಿಲವಾಗಿದ್ದರೂ ತಮ್ಮ ಈ ವಿಶಿಷ್ಟ ಭಾಷೆಯ ಮೂಲಕ ಅದನ್ನು ಸುಲಲಿತವಾಗಿ ಓದುಗರಿಗೆ ತಲುಪಿಸಿಬಿಡುತ್ತಾರೆ.