Product Description
AI ಕಥೆಗಳು ಸೃಷ್ಟಿಕರ್ತ ಬ್ರಹ್ಮನ ಕಾಲ ಹಳತಾಯಿತು. ಮಾನವನ ಪಯಣವೂ ಭರ್ಜರಿಯಾಗಿತ್ತು. ಇನ್ನು ಮುಂದೇನು ಎಂಬ ಪ್ರಶ್ನೆ ಎಲ್ಲಾ ಕಾಲಕ್ಕೂ ಕಾಡಿರುವಂಥದ್ದೇ. ಅದೆಷ್ಟೋ ಸಾವಿರ ವರ್ಷಗಳ ವಿಕಾಸದ ಹಾದಿಯಲ್ಲಿ ಮನುಷ್ಯ ಏನೇನನ್ನೋ ಸೃಷ್ಟಿಸಿದ್ದಾನೆ. ಆದರೆ ನನಗೆ ಅಚ್ಚರಿಯೆನಿಸುವುದು ಅವೆಲ್ಲಾ ಮೊದಲ ಬಾರಿಗೆ ರೂಪುತಾಳಿದ್ದು ಮಾನವನ ಮೆದುಳಿನಲ್ಲಿ ಎಂಬ ಸತ್ಯ. ಈಜಿಪ್ಟಿನ ಪಿರಾಮಿಡ್ಡುಗಳು ಎದ್ದು ನಿಲ್ಲಲು ವರ್ಷಗಳೇ ಹಿಡಿದಿರಬಹುದು. ಆದರೆ ಪ್ರಾಚೀನ ಈಜಿಪ್ಷಿಯನ್ ನಿರ್ಮಾತೃಗಳ ಕಲ್ಪನೆಯಲ್ಲಿ ಅದು ಆಗಲೇ ಗತ್ತಿನಿಂದ ನಿಂತಿತ್ತು. ವಿಜ್ಞಾನಿ ಟೆಸ್ಲಾನ ಕಲ್ಪನಾಶಕ್ತಿ ಅದೆಷ್ಟು ಅಗಾಧವಾಗಿತ್ತೆಂದರೆ ಆತ ತನ್ನ ಮನದಲ್ಲೇ ದೃಶ್ಯಗಳನ್ನು ಕಲ್ಪಿಸಿಕೊಂಡು ಯಂತ್ರಗಳ ಸಂಕೀರ್ಣ ಬಿಡಿಭಾಗಗಳೊಂದಿಗೆ ಒಡನಾಡುತ್ತಿದ್ದನಂತೆ. ಕಿಲಾಡಿ ಮನುಷ್ಯ ತನ್ನ ತಲೆ ಓಡಿಸಿ ತಂತ್ರಜ್ಞಾನವನ್ನು ಸೃಷ್ಟಿಸಿದ. ನಂತರ ತನ್ನ ಬಹುತೇಕ ಕೆಲಸಗಳನ್ನು ಯಂತ್ರಗಳಿಗೆ ವಹಿಸಿ ಆರಾಮಾಗಿಬಿಟ್ಟ. ಈಗ ತನ್ನಂತೆ ತಲೆ ಓಡಿಸುವ ಕೆಲಸವನ್ನೂ ತನ್ನ ಯಂತ್ರಗಳಿಗೆ ನೀಡಿ, ತನ್ನ ಬುದ್ಧಿಮತ್ತೆಯ ಮಿತಿಗಿಂತಲೂ ಮಿಗಿಲಾದ ಅದ್ಭುತಗಳನ್ನು ಸೃಷ್ಟಿಸಲು ಸಿದ್ಧನಾಗಿ ನಿಂತಿದ್ದಾನೆ. ಅಂಬೆಗಾಲಿಡುತ್ತಿರುವ ತನ್ನ ಕನಸು ಮುಂದೆ ನಿಧಾನವಾಗಿ ಎದ್ದು ನಿಲ್ಲುವ ಎಲ್ಲಾ ಭರವಸೆಗಳೂ ಆತನಿಗಿವೆ. ಅಂದಹಾಗೆ ಕೃತಕ ಬುದ್ಧಿಮತ್ತೆಯೆಂಬ ಪರಿಕಲ್ಪನೆಯು