Product Description
“ಸಾಸಿವೆ ತಂದವಳು” ಎನ್ನುವ ಶೀರ್ಷಿಕೆಯೇ ನಮ್ಮನ್ನು ಒಂದು ಕ್ಷಣ ಹಿಡಿದು ನಿಲ್ಲಿಸುತ್ತದೆ. ಯಾಕೆಂದರೆ, ಸಾವಿಲ್ಲದ ಮನೆಯಿಲ್ಲ ಎಂಬುದನ್ನು ತಿಳಿದು ಸಾಸಿವೆ ತರಲಾರದೆ ಹೋದವಳ ಕಥೆ ಇಲ್ಲಿ ಇನ್ನೊಂದು ಅರ್ಥವನ್ನೇ ಪಡೆಯುವಂತೆ ಬಳಕೆಯಾಗಿದೆ. ಏಕಕಾಲದಲ್ಲಿ ಅಂತರಂಗದ ಅನಿಸಿಕೆಯ ಸತ್ಯಗಳನ್ನೂ, ಬಹಿರಂಗದಲ್ಲಿ ಓದುಗನಿಗಾಗಿ ಕೊಡಬೇಕಾದ ವಿವರಗಳನ್ನೂ ಒಟ್ಟಾಗಿ ಹಿಡಿದಿಡುವ ಗದ್ಯ ಇಲ್ಲಿ ಅಪೂರ್ವವಾದದ್ದು. ತನ್ನ ಅಂತರಂಗದ ಅಸಹನೀಯವಾದ ಯಾತನೆಯ ಕತೆಯನ್ನೂ, ಜೊತೆಗೆ ಅದನ್ನು ಗೆದ್ದು ನಿಲ್ಲುವ ಜೀವನೋತ್ಸಾಹದ ದಿವ್ಯ ಕ್ಷಣಗಳನ್ನೂ ಒಟ್ಟಾಗಿ ಸೆರೆ ಹಿಡಿದಿರುವ ಈ ಬರವಣಿಗೆ ವಾಸ್ತವಿಕವೂ ಹೌದು, ಒಂದು ಕಥೆಯಂತೆ ಅಥವಾ ಕವಿತೆಯಂತೆ ಅಪಾರವಾದ ಕಾಲ್ಪನಿಕ ಶಕ್ತಿಯನ್ನು ಪಡೆದ ಸಾಹಿತ್ಯ ಕೃತಿಯೂ ಹೌದು.